ಶೇಕಡ 50 ಅನುದಾನ ಪಟ್ಟಣದ ಅಭಿವೃದ್ಧಿಗೆ ಮೀಸಲು

Oplus_131072
Oplus_131072
Published on
 ನಂಜನಗೂಡು :   ಸರ್ಕಾರದಿಂದ ತಾಲೂಕಿಗೆ  ಬಿಡುಗಡೆಯಾಗಿರುವ ಅನುದಾನದಲ್ಲಿ ಶೇಕಡ 50ರಷ್ಟು ಅನುದಾನವನ್ನ ಪಟ್ಟಣದ ಅಭಿವೃದ್ಧಿಗೆ ಮೀಸಲಿಡಲಾಗುವುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.  ಪಟ್ಟಣದ ವಾರ್ಡ್ಗಳು ಹಾಗೂ ಫುಡ್ ಜೋನ್  ರಸ್ತೆ ಬಳಿ ಇಂಟರ್ಲಾಕ್, ಹಾಗೂ ನಗರಸಭಾ ವ್ಯಾಪ್ತಿಯ ಕಂಬಗಳಿಗೆ ಎಲ್ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸುವ ಸುಮಾರು 3 ಕೋಟಿ 83 ಲಕ್ಷ ವೆಚ್ಚದ  ಕಾಮಗಾರಿಗಳಿಗೆ  ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯರಾದ ತಿಮ್ಮಯ್ಯ ರವರು, ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಉಪಾಧ್ಯಕ್ಷ ರಿಯಾನಾ ಬಾನು, ನಗರಸಭಾ ಸದಸ್ಯರಾದ ವಿಜಯ ಲಕ್ಶ್ಮೀ, ಗಾಯತ್ರಿ ಮುರುಗೇಶ್, ಸೌಭಾಗ್ಯ,ಮೀನಾಕ್ಷಿ, ಗಾಯತ್ರಿ, ಪ್ರದೀಪ್ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net