ಹಳ್ಳಿಕಾನು ಭೂತೇಶ್ವರ ದೇವರಿಗೆ ಹರಕೆ ತೀರಿಸಿದ ಶಾಸಕ ಭೀಮಣ್ಣ ನಾಯ್ಕ

15sirsi1bhimanna naik
Published on

ಶಿರಸಿ: ತಾಲೂಕಿನ ಹಳ್ಳಿಕಾನು ಗ್ರಾಮದ ಶ್ರೀ ಭೂತೇಶ್ವರ ದೇವರ ಧಾರ್ವಿುಕ ಕಾರ್ಯಕ್ರಮಗಳು ಭಾನುವಾರ ಸಂಭ್ರಮದಿಂದ ಜರುಗಿದವು.

ಕಾರ್ಯಕ್ರಮದಲ್ಲಿ ಶಾಸಕ ಭೀಮಣ್ಣ ನಾಯ್ಕ ಅವರಿಗೆ ತುಲಾಭಾರ ನೆರವೇರಿಸಿ ಗ್ರಾಮಸ್ಥರು ಹರಕೆ ತೀರಿಸಿದರು.

ಪ್ರತಿ ವರ್ಷವೂ ಕುಳವೆ ಗ್ರಾಮ ಪಂಚಾಯಿತಿಯ ಹಳ್ಳಿಕಾನು ಗ್ರಾಮದಲ್ಲಿ ಸಂಕ್ರಾತಿ ನಿಮಿತ್ತ 1001ಸತ್ಯ ನಾರಾಯಣ ಕಥೆ ಸೇರಿ ವಿವಿಧ ಧಾರ್ವಿುಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಅದರಂತೆ ಈ ಬಾರಿಯೂ ಸಾವಿರಾರು ಭಕ್ತರು ದೇವರ ಆಶೀರ್ವಾದ ಪಡೆದುಕೊಂಡರು.

ತುಲಾಭಾರ:

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಭೀಮಣ್ಣ ನಾಯ್ಕ ಶಾಸಕರಾದಲ್ಲಿ ಅವರಿಗೆ ತುಲಾಭಾರ ನಡೆಸುವುದಾಗಿ ಹಳ್ಳಿಕಾನ ಗ್ರಾಮಸ್ಥರು ಹರಕೆ ಹೊತ್ತಿದ್ದರು. ಆ ಪ್ರಕಾರ ಶಾಸಕ ಭೀಮಣ್ಣ ನಾಯ್ಕ ಭಾನುವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತುಲಾಭಾರ ನಡೆಸಿಕೊಟ್ಟರು. ಕಾಯಿ ಮತ್ತು ಅಡಕೆಯಿಂದ ತುಲಾಭಾರ ನಡೆಸಿದ ಗ್ರಾಮಸ್ಥರು, ಕಾಂಗ್ರೆಸ್ ಕಾರ್ಯಕರ್ತರು, ಭೀಮಣ್ಣ ನಾಯ್ಕ ಅಭಿಮಾನಿಗಳು ಶ್ರೀ ದೇವರ ಹರಕೆ ತೀರಿಸಿದರು.

ಇನ್ನು ಸಂಕ್ರಾತಿಯ ನಿಮಿತ್ತ ಧಾರ್ವಿುಕ ಕಾರ್ಯಕ್ರಮದ ನಂತರ ರಾತ್ರಿ ಹಳ್ಳಿಕಾನ ಗ್ರಾಮಸ್ಥರಿಂದ ‘ತವರು ಮನೆ ಕುಂಕುಮ ’ ಎಂಬ ಸಾಮಾಜಿಕ ನಾಟಕ ಪ್ರದರ್ಶನ ನಡೆಯಿತು.

ಹಳ್ಳಿಕಾನ ಶ್ರೀ ಭೂತೇಶ್ವರ ದೇವರ ಸನ್ನಿಧಿಗೆ ಹಲವು ಬಾರಿ ಭೇಟಿ ನೀಡಿದ್ದೇನೆ. ಶಾಸಕನಾಗಿ ಮೊದಲ ಬಾರಿಗೆ ಬಂದು ತುಲಭಾರ ಹರಕೆ ತೀರಿಸಿರುವುದು ನನ್ನ ಅದೃಷ್ಟ. ದೇವರ ಆಶೀರ್ವಾದದಿಂದ ಇದು ಸಾಧ್ಯವಾಗಿದೆ. | ಭೀಮಣ್ಣ ನಾಯ್ಕ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net