

ಶಿರಸಿ: ಸಹ ಪಂಗ್ತಿ ಭೋಜನದಿಂದ ಮಕ್ಕಳಲ್ಲಿ ಪರಸ್ಪರ ಏಕತೆ ಹಾಗೂ ಅನ್ಯೂನ್ಯತೆ ಬೆಳೆಸುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಬಂಡಲ ಸರ್ಕಾರಿ ಪ್ರೌಢಶಾಲೆಯ 1500 ವಿದ್ಯಾರ್ಥಿಗಳಿಗೆ ತರಕಾರಿ ಬೀಜಗಳನ್ನು ವಿತರಿಸಿ, ನಂತರ ಮಕ್ಕಳೊಟ್ಟಿಗೆ ಕುಳಿತು ಮಧ್ಯಾಹ್ನದ ಬಿಸಿಯೂಟ ಮಾಡಿದರು.
ಬಿಸಿಯೂಟದ ಗುಣಮಟ್ಟವನ್ನು ಕಾಪಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮಕ್ಕಳೇ ತೋಟಗಾರಿಕೆಯಲ್ಲಿ ಪಾಲ್ಗೊಂಡು ತರಕಾರಿಗಳನ್ನು ಬೆಳೆದು, ಮನೆ, ಶಾಲೆಗಳಲ್ಲಿ ಉಪಯೋಗಿಸಿ ಎಂದು ಸಲಹೆ ನೀಡಿದರು. ಎಲ್ಲ ಶಾಲೆಗಳಿಗೆ ತರಕಾರಿ ಬೀಜಗಳನ್ನು ವಿತರಿಸುವಂತೆ ಸಲಹೆ ನೀಡಿದರು. ಶಾಲೆಯಲ್ಲಿ ರಚಿಸಲಾದ ಸಂಸತ್ತಿನ ಅಕ್ಷರ ದಾಸೋಹ ಹಾಗೂ ತೋಟಗಾರಿಕೆ ಮಂತ್ರಿಗಳು ಪ್ರತಿನಿತ್ಯ ಊಟದ ಉಸ್ತುವಾರಿ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಶಿಕ್ಷಣ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.