ದಾನಿಗಳ ಸಹಕಾರದೊಂದಿಗೆ ಮನೆ ಹಸ್ತಾಂತರ ಕಾರ್ಯಕ್ರಮ

kavoor
ಕಾವೂರು ಪಳನೀರು ಎಂಬಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ನಾಶವಾಗಿದ್ದ ಮನೆಯೊಂದನ್ನು ಶಾಸಕ ಡಾ.ವೈ.ಭರತ್ ಶೆಟ್ಟಿ ಅವರ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಪುನರ್ ನಿರ್ಮಿಸಲಾಗಿದ್ದು, ಮೇಯರ್ ಜಯಾನಂದ ಅಂಚನ್ ಅವರು ಮನೆಯ ಕೀಯನ್ನು ಮನೆಯೊಡತಿ ಇಂದಿರಾ ಅವರಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
Published on

ಮಂಗಳೂರು: ಕಾವೂರು ಪಳನೀರು ಎಂಬಲ್ಲಿ ಜ.23ರಂದು ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ನಾಶವಾಗಿದ್ದ ಮನೆಯೊಂದನ್ನು ಶಾಸಕ ಡಾ.ವೈ.ಭರತ್ ಶೆಟ್ಟಿ ಅವರ ನೇತೃತ್ವದಲ್ಲಿ, ಊರಿನ ಸಂಘ ಸಂಸ್ಥೆಗಳು ಹಾಗೂ ದಾನಿಗಳ ಸಹಕಾರದೊಂದಿಗೆ 9.36 ಲಕ್ಷ ರೂಪಾಯಿ ವೆಚ್ಚದಲ್ಲಿ ಸಂಪೂರ್ಣವಾಗಿ ಪುನರ್ ನಿರ್ಮಿಸಲಾಗಿದ್ದು, ಭಾನುವಾರ ಮನೆ ಹಸ್ತಾಂತರ ಕಾರ್ಯಕ್ರಮ ನೆರವೇರಿತು.

ಮೇಯರ್ ಜಯಾನಂದ ಅಂಚನ್ ಅವರು ಮನೆಯ ಕೀಯನ್ನು ಮನೆಯೊಡತಿ ಇಂದಿರಾ ಅವರಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂತಹ ಸಮಾಜಮುಖಿ ಕಾರ್ಯವನ್ನು ಪ್ರತಿಯೊಂದು ಸಂಘಸಂಸ್ಥೆಗಳು ಮಾಡಬೇಕು. ಅಜಿತ್ ಶೆಟ್ಟಿ ನೇತೃತ್ವದ ತಂಡ ಈ ಕಾರ್ಯವನ್ನು ಯಶಸ್ವಿಯಾಗಿ ಮಾಡಿದೆ. ದಾನಿಗಳು ಈ ಕಾರ್ಯಕ್ಕೆ ತಮ್ಮ ಸಾಥ್ ನೀಡಿರುವುದು ಖುಷಿಯ ವಿಚಾರ. ಯುವ ಸಮುದಾಯ ಮಾದರಿ ರೀತಿಯ ಕಾರ್ಯದಲ್ಲಿ ತಮ್ಮನು ತಾವು ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಜಿತ್ ಶೆಟ್ಟಿಯವರು ಮನೆ ನಿರ್ಮಾಣದ ಕಾರ್ಯಕ್ಕೆ ಮುಂದಾಗಿ ಅಗ್ರಪಂಕ್ತಿ ಹಾಕಿದ್ದಾರೆ ಎಂದರು.

ಇದೇ ಸಂದರ್ಭ ಲೈಫ್ ಲೈನ್ ಚಾರಿಟೇಬಲ್ ಟ್ರಸ್ಟನ್‌ನ ಅರ್ಜುನ್ ಭಂಡಾರ್‌ಕರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಡ ಕುಟುಂಬವೊಂದಕ್ಕೆ ರೂ.20 ಸಾವಿರ ಆರ್ಥಿಕ ನೆರವನ್ನು ನೀಡಲಾಯಿತು.

ಧಾನಿ ಅಜಿತ್ ಶೆಟ್ಟಿ ಕಾವೂರು, ಮಾಜಿ ಕಾರ್ಪೋರೇಟರ್ ದೀಪಕ್ ಪೂಜಾರಿ, ಪ್ರಮುಖರಾದ ಕೃಷ್ಣಪ್ಪ ಪೂಜಾರಿ, ಗಾಯತ್ರಿ, ಕಾವೂರು ಶಕ್ತಿ ಕೇಂದ್ರದ ಕಾರ್ಯದರ್ಶಿ ಸೀತೇಶ್ ಕೊಂಡೆ, ಸುಜಿತ್ ಕುಮಾರ್, ರಾಮ್ ಪ್ರಸಾದ್, ನಿಶಿತ್ ಪೂಜಾರಿ, ಬಾಲಚಂದ್ರ ಬಿ.ವಿ, ಮನೆಯ ಫಲಾನುಭವಿ ಇಂದಿರಾ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net