

ಧಾರವಾಡ: ಕೆಪಿಎಸ್‌ಸಿಯಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ಹೋಗುವ ದಿಸೆಯಲ್ಲಿ ದಕ್ಷ ಅಽಕಾರಿಯನ್ನು ಮುಂದುವರಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪ್ರಕಟಣೆ ನೀಡಿರುವ ಅವರು, ನೊಂದ ಕೆಲ ವಿದ್ಯಾರ್ಥಿಗಳು ನನ್ನನ್ನು ಭೇಟಿ ಮಾಡಿ ಕೆಪಿಎಸ್‌ಸಿಯಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಸರ್ಕಾರದ ಮೇಲೆ ಒತ್ತಡ ಹೇರಲು ಮನವಿ ಮಾಡಿದ್ದಾರೆ. ಸರ್ಕಾರ ಎಲ್ಲೆಲ್ಲಿ ಕೊಳ್ಳೆ ಹೊಡೆಯಬಹುದೋ ಅಲ್ಲಲ್ಲಿ ಒಬ್ಬ ಏಜೆಂಟರನ್ನು ನೇಮಿಸುತ್ತದೆ. ಅದರಲ್ಲಿ ಕೆಪಿಸಿಸಿ ಅಧ್ಯಕ್ಷ ಶಿವಶಂಕರಪ್ಪ ಓರ್ವ. ಕೆಪಿಎಸ್‌ಸಿಯಲ್ಲಿನ ದುರಾಡಳಿತ, ಭ್ರಷ್ಟಾಚಾರದಿಂದ ರಾಜ್ಯದ ವಿದ್ಯಾರ್ಥಿಗಳು ರೋಸಿ ಹೋಗಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿರುವ ಸರ್ಕಾರಕ್ಕೆ ನಾಚಿಕೆಯÁಗಬೇಕು. ಆದ್ದರಿಂದ ಹಾಲಿ ಅಧ್ಯಕ್ಷರನ್ನು ಕೂಡಲೇ ಉಚ್ಛಾಟನೆ ಮÁಡಿ ಸೂಕ್ತ ತನಿಖೆಗೆ ಆದೇಶಿಸಬೇಕು. ಜೊತೆಗೆ ದಕ್ಷ ಅಽಕಾರಿ ಕೆ.ಎಸ್. ಲತಾಕುಮÁರಿ ಅವರನ್ನು ಮುಂದುವರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಬೆಲ್ಲದ ಎಚ್ಚರಿಸಿದ್ದಾರೆ.