

ಹುಬ್ಬಳ್ಳಿ: ಶಾಸಕ ಅರವಿಂದ ಬೆಲ್ಲದ ಅವರ ಜನ್ಮದಿನ ಪ್ರಯುಕ್ತ ಅವರ ಅಭಿಮಾನಿಗಳು ಇಲ್ಲಿಯ ನವನಗರದ ಮೈತ್ರಿ ವೃದ್ಧಾಶ್ರಮದ ವಾಸಿಗಳಿಗೆ ಸಿಹಿ ವಿತರಣೆ ಮಾಡಿದರು. ಉಪಾಹಾರದ ವ್ಯವಸ್ಥೆ ಮಾಡಿದ್ದರು.
ವೃದ್ಧಾಶ್ರಮದ ಆವರಣದಲ್ಲಿ ಸಸಿ ನೆಡುವ ಮೂಲಕ ಹಸಿರೀಕರಣಕ್ಕೆ ನೆರವಾದರು.
ಯುವಕರ ಕಣ್ಮಣಿ, ಸರಳ- ಸಜ್ಜನ ರಾಜಕಾರಣಿ, ಬಡವರ ಬಂಧು ಎಂದು ಶಾಸಕ ಬೆಲ್ಲದ ಅವರನ್ನು ಆಶ್ರಮ ನಿವಾಸಿಗಳು ಕೊಂಡಾಡಿದರು.
ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ, ಪ್ರಕಾಶ ಗೊರನಕೊಳ್ಳ, ಮಂಜುನಾಥ ದಲಾಯತ್, ಬಸವರಾಜ ಚಳಗೇರಿ, ಗಂಗಾಧರ ಕುಮಾರ, ರವಿ ಮಾದರ, ಈಶ್ವರ ಮಾದರ, ಕುಮಾರ ಮಾದರ, ಕಿರಣ ಮಾದರ, ಹರೀಶ, ನವೀನ, ಗಣೇಶ, ಇತರರು ಪಾಲ್ಗೊಂಡಿದ್ದರು.