

ಯಲಬುರ್ಗಾ: ಪಟ್ಟಣದ ಸ್ನಾತಕೋತ್ತರ ಕೇಂದ್ರ ಹಾಗೂ ತಾಲೂಕಿನ ಗುನ್ನಾಳ ಗ್ರಾಮದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಗುರುವಾರ ಶಾಸಕ ಬಸವರಾಜ ರಾಯರಡ್ಡಿ ಭೇಟಿ ನೀಡಿ ವೀಕ್ಷಣೆ ನಡೆಸಿದರು.
ಪಾಲಿಟೆಕ್ನಿಕ್ ಕಾಲೇಜು ಮತ್ತು ಪಿಜಿ ಸೆಂಟರ್‌ಗೆ ಅಗತ್ಯ ಸಿಬ್ಬಂದಿ ನೇಮಕಾತಿ, ನೂತನ ಕೋರ್ಸ್ ಆರಂಭ ಹಾಗೂ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಸವರಾಜ ರಾಯರಡ್ಡಿ ಭರವಸೆ ನೀಡಿದರು.
ಈ ಹಿಂದೆ ನಾನು ಉನ್ನತ ಶಿಕ್ಷಣ ಸಚಿವನಾಗಿದ್ದಾಗ ಕ್ಷೇತ್ರದ ಬಡ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣ ದೊರೆಯಲೆಂಬ ಉದ್ದೇಶದಿಂದ ಪಿಜಿ ಸೆಂಟರ್ ಮತ್ತು ಪಾಲಿಟೆಕ್ನಿಕ್‌ಗಳನ್ನು ಮಂಜೂರು ಮಾಡಿಸಿ ಕಟ್ಟಡ ನಿರ್ಮಿಸಲಾಗಿದೆ. ಶೀಘ್ರ ಎರಡೂ ಕಾಲೇಜುಗಳಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿ ಅನುಕೂಲ ಕಲ್ಪಿಸಲಾಗುವುದು ಎಂದರು.
ಕೊಪ್ಪಳ ವಿವಿ ಕುಲಸಚಿವ ಕೆ.ವಿ.ಪ್ರಸಾದ, ಪಿಜಿ ಸೆಂಟರ್ ನಿರ್ದೇಶಕ ಪ್ರಕಾಶ ಎಳವಟ್ಟಿ, ಕೇಂದ್ರದ ಪ್ರಾಧ್ಯಾಪಕ ಬಸವರಾಜ ಈಳಿಗನೂರ, ಸಿ.ಐ.ಛಲವಾದಿ, ಸಾಧು ಸೂರ್ಯಕಾಂತ, ಪಾಲಿಟೆಕ್ನಿಕ್ ಪ್ರಾಚಾರ್ಯ ವಿಠ್ಠಲಕುಮಾರ, ಮಾಜಿ ಪ್ರಾಚಾರ್ಯ ಪಿ.ಎಂ.ಪಾಟೀಲ್, ಪ್ರಮುಖರಾದ ರಾಘವೇಂದ್ರ ಜೋಶಿ, ಸುಧೀರ ಕೊರ್ಲಹಳ್ಳಿ, ಶಿವನಗೌಡ ದಾನರಡ್ಡಿ, ರುದ್ರಪ್ಪ ಮರಕಟರ್, ಮಲ್ಲು ಜಕ್ಕಲಿ, ಶರಣಗೌಡ ಬಸಾಪುರ, ಪುನೀತ್ ಕೊಪ್ಪಳ ಇದ್ದರು.