

ಯಲಬುರ್ಗಾ: ಕ್ಷೇತ್ರದಲ್ಲಿ ಐದು ಪಶು ಆಸ್ಪತ್ರೆಗಳು ಕಾರ್ಯ ಆರಂಭ ಮಾಡಿದ್ದು, ರೈತರು ಸದುಪಯೋಗಪಡಿಸಿಕೊಳ್ಳಲಿ ಎಂದು ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ವಜ್ರಬಂಡಿ ಗ್ರಾಮದಲ್ಲಿ ಬುಧವಾರ ಪಶು ಚಿಕಿತ್ಸಾಲಯ ಉದ್ಘಾಟಿಸಿ ಮಾತನಾಡಿದರು. ಒಂದು ಆಸ್ಪತ್ರೆಯಲ್ಲಿ ವೈದ್ಯ, ಇನ್ಸ್‌ಪೆಕ್ಟರ್, ಇಬ್ಬರು ಡಿ-ದರ್ಜೆ ನೌಕರರು ಸೇವೆಗೆ ದೊರೆಯಲಿದ್ದಾರೆ. 30 ಲಕ್ಷ ರೂ.ದಲ್ಲಿ ಒಂದು ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಕ್ಷೇತ್ರದ ಮಸಾರಿ ಭಾಗದ 13, ಎರ‌್ರಿ ಭಾಗದ 19 ಕೆರೆಗಳನ್ನು ತುಂಬಿಸಲಾಗುವುದು ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಯೂರಿಯಾ ಗೊಬ್ಬರ ಸಮಸ್ಯೆಗೆ ಕೇಂದ್ರ ಸರ್ಕಾರ ಕಾರಣವಾಗಿದೆ. ತಾಲೂಕಿಗೆ ಒಂದು ಸಾವಿರ ಟನ್ ಯೂರಿಯಾ ತರಿಸಲಾಗುತ್ತಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು. ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಪಶು ಇಲಾಖೆ ಅಧಿಕಾರಿ ಡಾ.ಮಲ್ಲಯ್ಯ, ಡಾ.ಪ್ರಕಾಶ ಚೂರಿ, ತಾಪಂ ಇಒ ಸಂತೋಷ ಪಾಟೀಲ ಬಿರಾದಾರ, ಸಿಪಿಐ ಮೌನೇಶ್ವರ ಮಾಲಿಪಾಟೀಲ, ಗ್ರಾಪಂ ಅಧ್ಯಕ್ಷೆ ರಾಥೋಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ಮುಖಂಡರಾದ ವೀರನಗೌಡ ಪೊಲೀಸ್ ಪಾಟೀಲ, ರೇವಣೆಪ್ಪ ಸಂಗಟಿ, ಡಾ,ಶಿವನಗೌಡ ದಾನರಡ್ಡಿ, ಆನಂದ ಉಳ್ಳಾಗಡ್ಡಿ, ಸುಧೀರ್ ಕೋರ್ಲಳ್ಳಿ, ಸಂಗಣ್ಣ ಟೆಂಗಿನಕಾಯಿ ಇತರರಿದ್ದರು.