

ವಿಜಯಪುರ: ಸಮಾಜದ ಅಭಿವೃದ್ಧಿಗೆ ಇಂಜಿನಿಯರ್ಗಳ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಕನಕದಾಸ ಬಡಾವಣೆಯಲ್ಲಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ಗಳ ಸಂದ ನೂತನವಾಗಿ ನಿರ್ಮಿಸಿದ ಸರ್ ಎಂ. ವಿಶ್ವೇಶ್ವರಯ್ಯ ಭವನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಂವು ಇಂಜಿನಿಯರ್ ದಿನಾಚರಣೆಯಂದೇ ಸ್ವಂತ ಕಟ್ಟಡ ಉದ್ಘಾಟಿಸುತ್ತಿರುವ ಕಾರ್ಯ ಶ್ಲಾನೀಯವಾಗಿದೆ. ಈ ಭವನವು ನಗರದ ಹಲವಾರು ಸಂಗಳಿಗೆ ಮಾದರಿಯಾಗುವ ಜತೆಗೆ ಕಟ್ಟಡದ ಸದ್ಬಳಕೆ ಆಗಲಿ ಎಂದರು.ಸಂದ ಅಧ್ಯಕ್ಷ ಅರುಣ ಮಠ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂದ ಹಿರಿಯ ಸದಸ್ಯರಾದ ಸುಧೀರ ಟಂಕಸಾಲಿ ಹಾಗೂ ಎಸ್.ವಿ. ಸಕ್ರಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಂದ ಕಟ್ಟಡ ನಿರ್ಮಾಣಕ್ಕೆ ಸಾಮಗ್ರಿ ನೀಡಿದವರನ್ನು ಸನ್ಮಾನಿಸಲಾಯಿತು.
ರಿಯಲ್ ಎಸ್ಟೇಟ್ ಉದ್ಯಮಿ ವಿ.ಜಿ. ಪಾರೇಖ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯ ಆಜಾದ್ ಪಟೇಲ, ಎಸ್.ಎಸ್. ಆಲೂರ, ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ ಹಾಗೂ ಗಿರೀಶ ಬಿರಾದಾರ, ಸಂದ ಉಪಾಧ್ಯ ಅಶೋಕ ರುಣವಾಲ, ಕಾರ್ಯದರ್ಶಿ ಅಶ್ರಫ್ ಕುಡಚಿ, ಜಂಟಿ ಕಾರ್ಯದರ್ಶಿ ಅಶೋಕ ಜಮಖಂಡಿ, ಖಜಾಂಚಿ ಮಹೇಶ ರಾಂಪೂರ, ಅರುಣ ಸರಸಂಬಿ, ಸದಸ್ಯರಾದ ವೀಣಾ ಟಂಕಸಾಲಿ, ರವಿ ರೇವಣಕರ, ಸಿದ್ದು ಗುಂಜುಟಗಿ, ಮಲ್ಲಿಕಾರ್ಜುನ ಪೂಜಾರಿ, ಎಂ.ಎಂ.ಬನೋಶಿ, ಎಸ್.ಎಸ್. ಹಿರೇಮಠ, ಎಸ್.ಸಿ. ತೇಲಿ, ರಮೇಶ ನಾಲಾ, ಎಂ.ಎಸ್. ಅಂಗಡಿಮಠ, ಸಂಗಮೇಶ ಮಠ, ಜೆ.ಎನ್. ತೇರದಾಳ ಮತ್ತಿತರರಿದ್ದರು.
ಸಂದ ಉಪಾಧ್ಯ ಸಿ.ಆರ್. ಗಂಗಾಧರ ಸ್ವಾಗತಿಸಿದರು. ಸುಭಾಷ ಜಂಬೂರೆ ನಿರೂಪಿಸಿದರು. ಮಹೇಶ ರಾಂಪೂರ ವಂದಿಸಿದರು.
ವಿಜಯಪುರದ ಕನಕದಾಸ ಬಡಾವಣೆಯಲ್ಲಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಗಳ ಸಂದ ನೂತನ ಭವನದ ಉದ್ಘಾಟನೆ ಕಾರ್ಯಕ್ರಮವನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಉದ್ಘಾಟಿಸಿದರು. ಅರುಣ ಮಠ, ಅಶೋಕ ರುಣವಾಲ ಮತ್ತಿತರರಿದ್ದಾರೆ.