

ಕವಿತಾಳ: ಸಾಮೂಹಿಕ ವಿವಾಹಗಳು ದುಂದುವೆಚ್ಚಕ್ಕೆ ಕಡಿವಾಣ ಹಾಕಲಿವೆ ಎಂದು ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಹೇಳಿದರು.
ಪಾಮನಕಲ್ಲೂರು ಗ್ರಾಮದ ಆದಿ ಬಸವೇಶ್ವರ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ 20 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಒಂದು ವಿವಾಹ ಮಾಡಲು ಅಂದಾಜು 5 ಲಕ್ಷ ರೂ.ಕ್ಕಿಂತ ಹೆಚ್ಚು ವೆಚ್ಚವಾಗುತ್ತದೆ. ಇದನ್ನು ಪಾಮನಕಲ್ಲೂರು ಗ್ರಾಮಸ್ಥರು ತಪ್ಪಿಸಿದ್ದಾರೆ. ದಂಪತಿಗಳು ಪ್ರೀತಿ, ಸಹಬಾಳ್ವೆಯಿಂದ ಜೀವನ ಸಾಗಿಸಬೇಕು ಎಂದರು.
ಯದ್ದಲದೊಡ್ಡಿಯ-ಪಾಮನಕಲ್ಲೂರು ವಳಬಳ್ಳಾರಿ ಚನ್ನಬಸವೇಶ್ವರ ಮಠದ ಸಿದ್ದಲಿಂಗ ಸ್ವಾಮಿ ಮಾತನಾಡಿ, ಪಾಮನಕಲ್ಲೂರು ಪಾವನವಾದ ಗ್ರಾಮವಾಗಿದೆ. ಇಲ್ಲಿ ಶರಣ ವಳಬಳ್ಳಾರಿ ಚನ್ನಬಸವೇಶ್ವರ ಜನಿಸಿದ ಗ್ರಾಮವಾಗಿದೆ. ಸಾಮೂಹಿಕ ವಿವಾಹವನ್ನು ಮಾಡುವ ಮೂಲಕ ದಂಪತಿಗಳಿಗೆ ಸಾಲಮುಕ್ತರನ್ನಾಗಿ ಮಾಡಿದ್ದಾರೆ ಎಂದರು.
ಹುನಕುಂಟಿಯ ಶರಣಯ್ಯಸ್ವಾಮಿ, ಮಲ್ಲದಗುಡ್ಡದ ಅಯ್ಯಪ್ಪ ತಾತ, ಕಾಂಗ್ರೆಸ್ ಪ್ರಮುಖ ರವಿ ಜಹಾಂಗೀರದಾರ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂತೋಷ ರಾಜಗುರು, ಆದಿ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಹನುಮಂತ ಶೇಳಗಿ, ಪಿಡಿಒ ಕೃಷ್ಣ, ಅಂಗನವಾಡಿ ಮೇಲ್ವಿಚಾರಕಿ ಮಹಾಂತಮ್ಮ, ಪ್ರಮುಖರಾದ ಹುಲುಗಪ್ಪ, ಪರಸಪ್ಪ, ಬಸಣ್ಣ, ದುರುಗಪ್ಪ, ಅಯ್ಯಪ್ಪ, ರಾಜಣ್ಣ, ಮಲ್ಲಯ್ಯ, ವಿರೇಶ, ಚನ್ನಬಸವ, ಶಶಿಧರ ಜಂಗಮರಹಳ್ಳಿ, ಮಾಳಿಂಗರಾಯ, ದೇವೇಂದ್ರಪ್ಪ ಉಪಸ್ಥಿತರಿದ್ದರು.