

ಹಿರೇಕೆರೂರ: ತಾಲೂಕಿನ ಚಿಕ್ಕೇರೂರ ಗ್ರಾಮದ ಕುಂತಿಗುಡ್ಡದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಶಾಸಕ ಯು.ಬಿ. ಬಣಕಾರ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಲೆಯಲ್ಲಿ ಸೌಲಭ್ಯ, ಪಾಠಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ರ್ಚಚಿಸಿ, ಅವರೊಂದಿಗೆ ಊಟ ಸವಿದರು.
ನಂತರ ಮಾತನಾಡಿದ ಶಾಸಕ ಯು.ಬಿ. ಬಣಕಾರ, ವಸತಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದು ಪರಿಗಣಿಸಿ ಪ್ರಾಚಾರ್ಯರು, ಸಿಬ್ಬಂದಿಯವರು ಕಾರ್ಯನಿರ್ವಹಿಸಬೇಕು. ಅಂದಾಗ ಮಾತ್ರ ಸರ್ಕಾರದ ಉದ್ದೇಶ ಸಫಲವಾಗಲು ಸಾಧ್ಯ ಎಂದರು.
ಶಾಲೆಯಲ್ಲಿ ಸ್ವಚ್ಛತೆ ಕಾಪಾಡಬೇಕು. ಶುದ್ಧ ಹಾಗೂ ಗುಣಮಟ್ಟದ ಅಹಾರ ತಯಾರಿಸಬೇಕು. ಮೊದಲು ಶಿಕ್ಷಕರು, ಅಡುಗೆ ಸಿಬ್ಬಂದಿ ಸವಿದು ಆಹಾರ ಪರೀಕ್ಷಿಸಿದ ನಂತರ ವಿದ್ಯಾರ್ಥಿಗಳಿಗೆ ಬಡಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ಶಿವರಾಜ ಹರಿಜನ, ಕರವೇ ಅಧ್ಯಕ್ಷ ಭರಮಪ್ಪ ಡಮ್ಮಳ್ಳಿ, ಪ್ರಾಚಾರ್ಯ ಎಂ.ಎಸ್. ಶಿಗ್ಗಾಂವಿ, ಸುಭಾಸ ಕಾಗೇರಿ, ನಾಗರಾಜ ಮಲ್ಲಾಡದ, ಮಂಜಪ್ಪ, ಬಸೀರಸಾಬ್ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಲೆಕ್ಕಜಪ್ಪಳವರ, ದಯಾನಂದ ಬಣಕಾರ, ಪರಮೇಶಪ್ಪ ದೊಡ್ಮನಿ, ರುದ್ರಗೌಡ ದ್ಯಾಮನಗೌಡ್ರ, ರಾಜೇಶ ದ್ಯಾವಳ್ಳಿ, ದಯಾನಂದ ಹಾಗೂ ಶಿಕ್ಷಕರು, ಸಿಬ್ಬಂದಿ, ಗ್ರಾಮಸ್ಥರು ಇದ್ದರು.