ಕೆರೆಗಳಿಗೆ ನೀರು ಹರಿಸಲು ಶಾಸಕ ಬಾಲಕೃಷ್ಣ ಸೂಚನೆ

ಬಾಗೂರು ಹೋಬಳಿಯ ಎಂ.ಕೆ. ಹೊಸೂರು ಗ್ರಾಮದಲ್ಲಿ ಕಲ್ಲೇ ಸೋಮನಹಳ್ಳಿ ಏತ ನೀರಾವರಿ ಯೋಜನೆಯ ಡೆಲಿವರಿ ಚೇಂಬರ್‌ನ ಕಾಮಗಾರಿಯನ್ನು ಶಾಸಕ ಸಿ.ಎನ್. ಬಾಲಕೃಷ್ಣ ಗುರುವಾರ ವೀಕ್ಷಿಸಿದರು. ಇಂಜಿನಿಯರ್ ದೀಪಕ್, ಮರಿದೇವೇಗೌಡ, ಬಸವರಾಜ್, ತಮ್ಮಯ್ಯಣ್ಣ, ಶಂಕರ್, ಮಹಾಲಿಂಗೇಗೌಡ, ಟಿ.ಎಂ.ಗಿರೀಶ್, ಟಿ.ವಿ.ಬಸವರಾಜ್ ಇತರರು ಇದ್ದರು.
ಬಾಗೂರು ಹೋಬಳಿಯ ಎಂ.ಕೆ. ಹೊಸೂರು ಗ್ರಾಮದಲ್ಲಿ ಕಲ್ಲೇ ಸೋಮನಹಳ್ಳಿ ಏತ ನೀರಾವರಿ ಯೋಜನೆಯ ಡೆಲಿವರಿ ಚೇಂಬರ್‌ನ ಕಾಮಗಾರಿಯನ್ನು ಶಾಸಕ ಸಿ.ಎನ್. ಬಾಲಕೃಷ್ಣ ಗುರುವಾರ ವೀಕ್ಷಿಸಿದರು. ಇಂಜಿನಿಯರ್ ದೀಪಕ್, ಮರಿದೇವೇಗೌಡ, ಬಸವರಾಜ್, ತಮ್ಮಯ್ಯಣ್ಣ, ಶಂಕರ್, ಮಹಾಲಿಂಗೇಗೌಡ, ಟಿ.ಎಂ.ಗಿರೀಶ್, ಟಿ.ವಿ.ಬಸವರಾಜ್ ಇತರರು ಇದ್ದರು.
Published on

ಬಾಗೂರು: ಬಾಗೂರು ನವಿಲೇ ಸುರಂಗ ಸಂತ್ರಸ್ತ ರೈತರ ಕನಸಿನ ಬೃಹತ್ ಕಲ್ಲೆ ಸೋಮನಹಳ್ಳಿ ಏತ ನೀರಾವರಿ ಯೋಜನೆಯಿಂದ ತಗಡೂರು, ಲಕ್ಕರಸನಹಳ್ಳಿ, ರಂಗಪುರ, ಕೆರೆಗಳಿಗೆ ನೀರು ಹರಿಸಲು ಇಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದೇನೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.

ಬಾಗೂರು ಹೋಬಳಿಯ ಎಂ.ಕೆ. ಹೊಸೂರು ಗ್ರಾಮದಲ್ಲಿ ಗುರುವಾರ ಡೆಲಿವರಿ ಚೇಂಬರ್‌ನ ಕಾಮಗಾರಿ ವೀಕ್ಷಿಸಿ ಮಾತನಾಡಿದರು.

ಸುಮಾರು 32 ಕೋಟಿ ರೂ. ವೆಚ್ಚದಲ್ಲಿ 19 ಕೆರೆಗಳಿಗೆ ಹೇಮಾವತಿ ನದಿ ನೀರು ತುಂಬಿಸುವ ಯೋಜನೆಯ ಉಳಿದ ಕಾಮಗಾರಿ 20 ದಿನಗಳಲ್ಲಿ ಪೂರ್ಣಗೊಂಡ ಬಳಿಕ ಶಿವರ ಕೆಂಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳಮರನಹಳ್ಳಿ, ಎಂ.ಕೆ.ಹೊಸೂರು, ಕಾಮನಹಳ್ಳಿ, ಸೋಮನಹಳ್ಳಿ, ಹೊಂಗೆಹಳ್ಳಿ, ಮಧುಗುಡ್ಡನಹಳ್ಳಿ ಮುತ್ತಿನ ಕಟ್ಟೆ ಕೆಂಬಾಳು ಬಳಗಟ್ಟ, ಬಿದರೆ, ಕೆರೆಗಳಿಗೆ ನೀರು ಹರಿಸುವುದರಿಂದ ಈ ಭಾಗದ ರೈತರ ಭೂಮಿಯಲ್ಲಿ ಅಂತರ್ಜಲ ವೃದ್ಧಿಯಾಗಲಿದೆ ಎಂದರು.

ಈ ಯೋಜನೆಯನ್ನು 25 ವರ್ಷಗಳ ಹಿಂದೆ ಅವೈಜ್ಞಾನಿಕವಾಗಿ ರೂಪಿಸಲಾಗಿತ್ತು. ಇದರಿಂದ ಈ ಭಾಗದ ರೈತರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಮನಗೊಂಡು ಎಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಇದನ್ನು ನವಿಲೇ ನಿರ್ಗಮನ ನಾಲೆಯಿಂದ ನೂತನ ಏತ ನೀರಾವರಿ ಯೋಜನೆ ರೂಪಿಸಿ ಚಾಲನೆ ನೀಡುವ ಮೂಲಕ ಜನಪರ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಇಂಜಿನಿಯರ್ ದೀಪಕ್, ಗ್ರಾಪಂ ಅಧ್ಯಕ್ಷ ಶಂಕರ್, ಮುಖಂಡರಾದ ಮರಿ ದೇವೇಗೌಡ, ಓಬಳಾಪುರ ಬಸವರಾಜ್, ಮಧಗುಡ್ಡನಹಳ್ಳಿ ಭೂದೇಶ್, ಕಲ್ಲೇ ಸೋಮನಹಳ್ಳಿ ತಮ್ಮಯ್ಯಣ್ಣ, ಸಂತೋಷ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಎಂ.ಗಿರೀಶ್, ಟಿ.ವಿ. ಬಸವರಾಜ್, ಗ್ರಾಪಂ ಮಾಜಿ ಅಧ್ಯಕ್ಷರಾದ ಕಲ್ಮಲ್ಲೇನಹಳ್ಳಿ ಮಹಾಲಿಂಗೇಗೌಡ ಕಾಮನಾಯಕನಹಳ್ಳಿ ನಾಗೇಶ್, ತಗಡೂರು ತೋಂಟರಾಧ್ಯ, ಕೆಂಬಾಳು ಗೌರೀಶ್, ಒಬ್ಬಳಾಪುರ ತಿಮ್ಮೇಗೌಡ, ಸ್ವಾಮಿ, ಗಂಗಣ್ಣ, ಪ್ರದೀಪ್, ಎಲ್.ಬಿ.ಕಾಂತರಾಜ್, ಟಿ.ಸಿ. ಮಂಜುನಾಥ್, ಭುವನಳ್ಳಿ ಚಂದ್ರಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net