ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಬಿ.ವೈ.ವಿಜಯೇಂದ್ರ ಭೇಟಿ

26 ಎಸ್ಕೆಪಿ 2
ಮಳೆಯಿಂದ ಹಾನಿಗೊಳಗಾದ ಅಂಜನಾಪುರದ ನಿವಾಸಿ ಸುಜಾತಾ ವನಕಿಬಾಯಿ ಅವರ ಮನೆಯನ್ನು ಶಾಸಕ ಬಿ.ವೈ.ವಿಜಯೇಂದ್ರ ವೀಕ್ಷಿಸಿದರು. ಗುರುಮೂರ್ತಿ ಇತರರಿದ್ದರು.
Published on

ಶಿಕಾರಿಪುರ: ತಾಲೂಕಿನಾದ್ಯಂತ ಸತತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಂಜನಾಪುರದ ಸುಜಾತಾ ವನಕಿಬಾಯಿ ಅವರ ಮನೆ ಮೇಲೆ ಮರಬಿದ್ದು ಹಾನಿಯಾಗಿತ್ತು. ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಶಾಸಕರು, ಮನೆ ದುರಸ್ತಿಗೆ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ತಾಲೂಕಿನಲ್ಲಿ 54 ಕಚ್ಚಾಮನೆ, 3 ಪಕ್ಕಾಮನೆ, 1 ಕೊಟ್ಟಿಗೆ ಮನೆಗಳಿಗೆ ಹಾನಿಯಾಗಿದೆ. 2 ಜಾನುವಾರುಗಳು ಅಸುನೀಗಿವೆ.
ಈ ಸಂದರ್ಭದಲ್ಲಿ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಅಧಿಕಾರಿಗಳು, ಸ್ಥಳೀಯ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net