

ಗಂಗಾವತಿ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾದ ಶಾಸಕ ಬಿ.ವೈ.ವಿಜಯೇಂದ್ರ ಬೆಂಬಲಿಸಿ ನಗರದ ಗಾಂಧಿ ವೃತ್ತದಲ್ಲಿ ಅಭಿಮಾನಿ ಬಳಗದವರು ಶನಿವಾರ ವಿಜಯೋತ್ಸವ ಆಚರಿಸಿದರು.
ಬಿಜೆಪಿ ಕಾರ್ಯಕರ್ತರೊಂದಿಗೆ ವಿಜಯೇಂದ್ರ ಭಾವಚಿತ್ರ ಹಿಡಿದು ಸಂಭ್ರಮಿಸಿದರಲ್ಲದೇ, ಯುವಕರಿಗೆ ಆದ್ಯತೆ ನೀಡಿರುವ ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರಸಭೆ ಸದಸ್ಯ ಉಮೇಶಸಿಂಗನಾಳ್ ಮಾತನಾಡಿ, ಯುವಕರಿಗೆ ಬಿಜೆಪಿ ಸಾರಥ್ಯ ನೀಡಿರುವುದು ಸ್ವಾಗತಾರ್ಹ. ಸ್ವಂತ ಪರಿಶ್ರಮದಿಂದ ಉನ್ನತ ಸ್ಥಾನಕ್ಕೆ ಬಂದಿದ್ದಾರೆ. ವಿಜಯೇಂದ್ರ ನಾಯಕತ್ವದಿಂದ ಲೋಕಸಭೆ ಚುನಾವಣೆಯಲ್ಲಿ ಅನುಕೂಲವಿದ್ದು, ರಾಜ್ಯದಾದ್ಯಂತ ಪಕ್ಷ ಸಂಘಟನೆಗೆ ಬಲ ದೊರೆತಿದೆ ಎಂದರು.
ಮಕ್ಕಳ ತಜ್ಞ ಡಾ.ಕೆ.ಅಮರೇಶ ಪಾಟೀಲ್, ಅಭಿಮಾನಿಗಳ ಬಳಗದ ಪ್ರತಿನಿಧಿಗಳಾದ ಬಸವರಾಜ ಹುಬ್ಬಳ್ಳಿ, ಲಿಂಗರಾಜ್, ಶಿವಪ್ರಕಾಶ ಅಕ್ಕಿ, ಗಣೇಶ, ಮೋಹನ್ ಸಿಂಗ್, ಬಿಜೆಪಿ ನಗರ ಘಟಕದ ಕಾರ್ಯದರ್ಶಿ ಶ್ರೀನಿವಾಸ ಧೂಳಾ ಇತರರಿದ್ದರು.