ವಿದ್ಯೆ ಯಾರೂ ಕದಿಯಲಾಗದ ಆಸ್ತಿ

Hrr16Shale2
filter: 0; fileterIntensity: 0.0; filterMask: 0; module: j; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (200, -1); aec_lux: 293.4191; hist255: 0.0; hist252~255: 0.0; hist0~15: 0.0;
Published on

ಹರಿಹರ: ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ, ವಿದ್ಯಾರ್ಥಿಗಳು ಅನ್ಯ ವಿಷಯದ ಬಗ್ಗೆ ಗಮನಹರಿಸದೆ ಓದಿನ ಕಡೆ ಗಮನ ಹರಿಸುವಂತೆ ಶಾಸಕ ಬಿ.ಪಿ. ಹರೀಶ್ ಕಿವಿಮಾತು ಹೇಳಿದರು.

ನಗರದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆಯಲ್ಲಿ ಸೋಮವಾರ ಬೆಂಗಳೂರಿನ ಸೆನಾಫಸಿಸ್ ಹಾಗೂ ಇಂಡಿಯಾ ಸುಧಾರ್ ಎಜುಕೇಷನಲ್ ಆಂಡ್ ಚಾರಿಟೆಬಲ್ ಟ್ರಸ್ಟ್ ವಿದ್ಯಾರ್ಥಿಗಳಿಗೆ ನೀಡಿದ ನೋಟ್​ಬುಕ್​ಗಳನ್ನು ವಿತರಿಸಿ ಮಾತನಾಡಿದರು.

ಜಗತ್ತಿನಲ್ಲಿ ಯಾರೂ ಕದಿಯಲು ಹಾಗೂ ಕಿತ್ತುಕೊಳ್ಳಲಾಗದಿರುವ ಆಸ್ತಿ ಎಂದರೆ ಅದು ವಿದ್ಯೆ. ಶಿಕ್ಷಕರು ಹೇಳಿದ ಪಾಠವನ್ನು ಶ್ರದ್ಧೆಯಿಂದ ಗ್ರಹಿಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಪಾಲಕರಿಗೆ, ಶಾಲೆಗೆ ಹಾಗೂ ಶಿಕ್ಷಕರಿಗೆ ಕೀರ್ತಿ ತನ್ನಿ. ಎನ್​ಜಿಒ ಸಂಸ್ಥೆಗಳು ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕರಿಸುತ್ತಿರುವುದು ಶ್ಲಾಘನೀಯ ಎಂದರು.

ಚಾರಿಟೆಬಲ್ ಟ್ರಸ್ಟ್ ನಿರ್ದೇಶಕ ಕಿರಣಕುಮಾರ್ ಮಾತನಾಡಿ, ನಮ್ಮ ಸಂಸ್ಥೆಯಿಂದ ಹರಿಹರ ತಾಲೂಕಿನ ಸರ್ಕಾರಿ ಪ್ರೌಢ ಹಾಗೂ ಪ್ರಾಥಮಿಕ 40 ಶಾಲೆಗಳಿಗೆ 21 ಸಾವಿರಕ್ಕಿಂತ ಹೆಚ್ಚು ನೋಟ್​ಬುಕ್​ಗಳನ್ನು ವಿತರಣೆ ಮಾಡಲಾಗುತ್ತಿದೆ. ಈ ಹಿಂದೆ ತಾಲೂಕಿನಲ್ಲಿ ಸುಮಾರು ಎರಡೂವರೆ ಕೋಟಿ ಅನುದಾನದಲ್ಲಿ 18 ಶೌಚಗೃಹ, ಮಹಿಳೆಯರ ವಿಶ್ರಾಂತಿ ಗೃಹಗಳ ನಿರ್ವಣ, ಕಂಪ್ಯೂಟರ್, ನಲಿ- ಕಲಿ ಕ್ರೀಡಾ ಸಾಮಗ್ರಿ ಜತೆಗೆ ಗ್ರಂಥಾಲಯಗಳಿಗೆ ಪುಸ್ತಕ ವಿತರಣೆ ಮಾಡಿ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದೇವೆ ಎಂದು ಹೇಳಿದರು.

ಮುಖ್ಯಶಿಕ್ಷಕ ಬಿ.ಬಿ. ರೇವಣನಾಯ್ಕ ಮಾತನಾಡಿ, ವಿದ್ಯಾಸಂಸ್ಥೆಯ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ನೀಡುವಂತೆ ಮನವಿ ಮಾಡಿದರು.

ಬಿ.ಆರ್.ಸಿ ಕೃಷ್ಣ್ಣ್ಪ, ಕಸಾಪ ತಾಲೂಕು ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಮುಖ್ಯಶಿಕ್ಷಕ ಬಿ.ಪಿ. ಉಮೇಶ್, ಸರ್ಕಾರಿ ನೌಕರರ ಸಂಘದ ಪೀರುನಾಯ್ಕ, ಬಡ್ತಿ ಮುಖ್ಯಶಿಕ್ಷಕ ಸಂಘದ ಅಧ್ಯಕ್ಷ ಆರ್.ಆರ್. ಮಠ, ಶಿಕ್ಷಕರಾದ ರಾಘವೇಂದ್ರ, ಮಲ್ಲಿಕಾರ್ಜುನ್, ಬಿ.ಪ್ರವೀಣಕುಮಾರ್, ಪರಶುರಾಮ, ತಿರುಮಲ ಬಣಕಾರ, ಮೃತ್ಯುಂಜಯ, ಎಂ. ಹೊನಕೇರಪ್ಪ, ಗಿರಿಜಮ್ಮ ಗಿರಿಯಪ್ಪನವರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net