ಶಾಲೆಯಲ್ಲಿನ ಜಗಳ ಪರಿಹರಿಸಿ

JLR ph 1 Jun 24 Manavi
Published on

ಜಗಳೂರು: ತಾಲೂಕಿನ ಅಣಬೂರು ಗ್ರಾಮದ ಮಾರುತಿ ಗ್ರಾಮಾಂತರ ಶಾಲೆಯಲ್ಲಿ ಆಡಳಿತ ಮಂಡಳಿ ಮತ್ತು ಶಿಕ್ಷಕರ ನಡುವೆ ಹೊಂದಾಣಿಕೆಯ ಕೊರತೆಯಿಂದ ಮಕ್ಕಳ ಕಲಿಕೆಗೆ ಹಿನ್ನಡೆಯಾಗುತ್ತಿದೆ. ಕೂಡಲೇ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಶಾಲೆಯು ವಿಶಾಲವಾದ ಆಟದ ಮೈದಾನ, ಕೊಠಡಿಗಳನ್ನು ಹೊಂದಿದ್ದು, ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ಆಡಳಿತ ಮಂಡಳಿ ಮತ್ತು ಶಿಕ್ಷಕರ ಒಳ ಜಗಳದಿಂದ ಶಾಲೆಯಲ್ಲಿ ಗೊಂದಲ ನಿರ್ವಣವಾಗಿದೆ ಎಂದು ಗ್ರಾಮಸ್ಥರು ದೂರಿದರು.

ಪ್ರಸಕ್ತ ಸಾಲಿನ ಜೂನ್ ತಿಂಗಳಿಂದ ಶಾಲೆಯ ಬಾಗಿಲು ಸರಿಯಾಗಿ ತೆಗೆದಿಲ್ಲ. ಒಂದು ಬಾರಿ ಆಡಳಿತ ಮಂಡಳಿಯ ಅಧ್ಯಕ್ಷರು ಶಾಲೆಗೆ ಬೀಗ ಹಾಕಿದರೆ, ಇನ್ನೊಂದು ಬಾರಿ ಶಿಕ್ಷಕರು ಬೀಗ ಹಾಕುತ್ತಿದ್ದಾರೆ, ಇದರಿಂದ ಮಕ್ಕಳ ಭವಿಷ್ಯ ಏನಾಗಬೇಕು ಎಂದ ಪ್ರಶ್ನಿಸಿ, ಎಲ್ಲ ಸಮಸ್ಯೆಗಳನ್ನು ಸರಿಪಡಿಸಿ ತರಗತಿಗಳನ್ನು ಪ್ರಾರಂಭಿಸಬೇಕು. ಸಭೆ ಕರೆದು ಕುಂದು- ಕೊರತೆಗಳನ್ನು ಪರಿಶೀಲಿಸಿ ನ್ಯಾಯ ಒದಗಿಸಬೇಕು ಎಂದು ಶಾಸಕರನ್ನು ಕೋರಿದರು.

ಮುಖಂಡರಾದ ರಂಗಸ್ವಾಮಿ, ಬಾಲಪ್ಪ, ಸಣ್ಣಕಾಟಪ್ಪ, ಗುಡ್ಡಪ್ಪ, ಹಾಲಸ್ವಾಮಿ, ಸಂತೋಷ್, ತಿಪ್ಪೇಸ್ವಾಮಿ, ನಾಗರಾಜ್, ಪ್ರಕಾಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net