ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದ ವೀರ ಮಹಿಳೆ

JLR ph 1 Oct 23 Jayanthi
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಜಗಳೂರು: ಆಧುನಿಕ ಕರ್ನಾಟಕ ನಿರ್ವಣಕ್ಕೆ ಕಿತ್ತೂರು ರಾಣಿ ಚನ್ನಮ್ಮ ನೀಡಿದ ಕೊಡುಗೆ ಅಪಾರ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಪಂಚಮಸಾಲಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ವೀರ ರಾಣಿ ಕಿತ್ತೂರು ಚನ್ನಮ್ಮ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

ಚನ್ನಮ್ಮ ಅವರ ಸಾಧನೆ ಅವಿಸ್ಮರಣೀಯ. ಬ್ರಿಟಷ್​ರಿಂದ ತಮ್ಮ ರಾಜ್ಯವನ್ನು ರಕ್ಷಿಸಲು ಧೈರ್ಯದಿಂದ ಹೋರಾಡಿದ ವೀರ ಮಹಿಳೆ. ಅವರ ತ್ಯಾಗ, ಶೌರ್ಯ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಇಂದಿಗೂ ಸ್ಮರಿಸಲಾಗುತ್ತದೆ ಎಂದರು.

ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದ ಚನ್ನಮ್ಮ ಇಂದಿನ ಮಹಿಳೆಯರಿಗೆ ಮಾದರಿ. ಅವರ ಸಾಹಸ, ಸಾಧನೆಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.

ಪಟ್ಟಣದ ನಂದಿನಿ ಲೇಔಟ್ ಬಡಾವಣೆಯಲ್ಲಿ ಪಂಚಮಸಾಲಿ ಸಮಾಜಕ್ಕೆ ನಿವೇಶನ ಕಲ್ಪಿಸಲು ಸೂಚಿಸಿದ್ದು, ತ್ವರಿತಗತಿಯಲ್ಲಿ ನಿವೇಶನ ಕೊಡಿ ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಕೆಪಿಸಿಸಿ ಎಸ್ಟಿ ಘಟಕದ ಮಾಜಿ ಅಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ಕನ್ನಡ ನಾಡು, ನುಡಿ, ಸಾಂಸ್ಕೃತಿಕ ಹಿರಿಮೆ ಹಾಗೂ ಐತಿಹಾಸಿಕ ಹಿನ್ನೆಲೆಗಳನ್ನು ಪರಿಚಯಿಸಿ ಸಮಾಜದಲ್ಲಿ ಉತ್ತಮ ಸಾಮರಸ್ಯ ಮೂಡಿಸಲು ದಾರ್ಶನಿಕರ ಜಯಂತಿಗಳನ್ನು ಆಚರಿಸುವುದು ಅವಶ್ಯವಾಗಿವೆ ಎಂದರು.

ಪಂಚಮಸಾಲಿ ಸಮಾಜದ ಅಧ್ಯಕ್ಷ ಯು.ಜಿ. ಶಿವಕುಮಾರ್ ಮಾತನಾಡಿ, ತಾಲೂಕಿನಲ್ಲಿ ಪಂಚಮಸಾಲಿ ಸಮಾಜದ ಜನಸಂಖ್ಯೆ ಹೆಚ್ಚಿದೆ. ಅಭಿವೃದ್ಧಿ ಚಟುವಟಿಕೆಗಳು, ಸಮಾಜದ ಸಭೆ- ಸಮಾರಂಭ ನಡೆಸಲು ಸಮುದಾಯ ಭವನದ ಅವಶ್ಯಕತೆ ಇದೆ. ಶಾಸಕರು ಸಮಾಜದ ಸೌಲಭ್ಯಕ್ಕಾಗಿ ಕೊಡುಗೆ ನೀಡಬೇಕು ಎಂದು ತಿಳಿಸಿದರು.

ಸಮಾಜದ ಮುಖಂಡರಾದ ವೀರೇಶ್, ಮಾಜಿ ಅಧ್ಯಕ್ಷ ಸಿದ್ದೇಶ್, ಪ್ರಾಚಾರ್ಯ ಕಲ್ಲೇಶ್, ಆರ್.ಐ. ವಸಂತ್ ಕುಮಾರ್, ಎಂ.ಎಸ್.ಪಾಟೀಲ್, ಸಿ. ತಿಪ್ಪೇಸ್ವಾಮಿ, ರಾಜಪ್ಪ ಮಾತನಾಡಿದರು.

ಇಒ ಕೆಂಚಪ್ಪ, ಬಿಇಒ ಹಾಲಮೂರ್ತಿ, ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಬಿ. ಮಹೇಶ್ವರಪ್ಪ, ಪೋಲಿಸ್ ಸಬ್ ಇನ್ಸ್​ಪೆಕ್ಟರ್ ಗಾದಿಲಿಂಗಪ್ಪ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಇತರರು ಇದ್ದರು.

ರಸ್ತೆ ವಿಸ್ತರಣೆಯಲ್ಲಿ ಸ್ವಾರ್ಥವಿಲ್ಲ: ನೂರಾರು ವರ್ಷಗಳಿಂದ ರಸ್ತೆ ವಿಸ್ತರಣೆಯಾಗಿರಲಿಲ್ಲ. ಆದರೆ ಇದೀಗ ಪಟ್ಟಣದ ಅಭಿವೃದ್ಧಿ ಮತ್ತು ಸೌಂದರ್ಯಕ್ಕೆ ಆದ್ಯತೆ ನೀಡಿ ರಸ್ತೆ ಅಗಲೀಕರಣಕ್ಕೆ ಮುನ್ನಡಿ ಬರೆದಿದ್ದೇನೆ. ಇದರಲ್ಲಿ ನನ್ನದಾಗಲೀ, ಅಧಿಕಾರಿಗಳದಾಗಲೀ ಯಾವುದೇ ಸ್ವಾರ್ಥವಿಲ್ಲ. ಎಲ್ಲರ ಅನುಕೂಲಕ್ಕಾಗಿ ಕೈ ಹಾಕಿದ್ದೇವೆ. ಭರವಸೆ ನೀಡಿದಂತೆ ಕೆಲಸ ಮಾಡುತ್ತಿದ್ದೇನೆ. ಆದರೆ ನಿಮಾನ್ಸ್ ಆಸ್ಪತ್ರೆಯಲ್ಲಿ ಇರುವ ಅರೆ ಹುಚ್ಚರಂತೆ ಮಾತನಾಡಿದರೆ ಉತ್ತರ ಕೊಡಲು ಸಾಧ್ಯವೇ? ಯಾವುದೇ ರಾಜಕೀಯ ಅನುಭವ ಇಲ್ಲದ ಕುಟುಂಬದಿಂದ ಬಂದಿದ್ದರೂ ಶಾಸಕನಾಗಿ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net