ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯ

JLR ph 1 July 15 Patrika Day
Published on

ಜಗಳೂರು: ಸಮಾಜದಲ್ಲಿ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಶಾಸಕ ಬಿ.ದೇವೆಂದ್ರಪ್ಪ ಹೇಳಿದರು.

ಪಟ್ಟಣದ ಇಂದಿರಾ ಬಡಾವಣೆಯ ಪತ್ರಿಕಾ ಭವನದಲ್ಲಿ ಮಂಗಳವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇನ್ನೂ ಬಾರದು, ನಾಳೆ ಬಾರದು, ಇಂದು ಬರಲಿ, ಈಗಲೇ ಬರಲಿ ಸತ್ಯಕ್ಕೆ ಹೆದರುವವನು ಯಾರು? ಎನ್ನುವ ರೀತಿಯಲ್ಲಿ ಪ್ರಾಮಾಣಿಕ, ಸತ್ಯ, ನಿಷ್ಠಾವಂತ ಪತ್ರಕರ್ತರು ಯಾರಿಗೂ ಅಂಜದೆ ಸಮಾಜದಲ್ಲಿ ಮುನ್ನುಗ್ಗಿ ತಮ್ಮ ಲೇಖನಿಯಿಂದ ಎಲ್ಲರನ್ನು ಎಚ್ಚರಿಸುತ್ತಿದ್ದಾರೆ ಎಂದರು.

ಕಾ.ನಿ.ಪ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ಶತಮಾನದ ಸಂಭ್ರಮಕ್ಕೆ ಸಮೀಪವಿರುವ ಕಾರ್ಯನಿರತ ಪತ್ರಕರ್ತರ ಸಂಘವು ತನ್ನದೇ ಆದ ಮೈಲಿಗಲ್ಲನ್ನು ಹೊಂದಿದೆ. ಇದರ ಅಡಿಯಲ್ಲಿ ಎಲ್ಲರು ಸಾಗಬೇಕು. ಒಗ್ಗಟ್ಟಾಗಿ ಇದ್ದಾಗ ಮಾತ್ರ ನಮ್ಮಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.

ಕಾ.ನಿ.ಪ ಸಂಘದ ತಾಲೂಕಾಧ್ಯಕ್ಷ ಜಿ.ಎಸ್. ಚಿದಾನಂದ ಮಾತನಾಡಿ, ಬರಪೀಡಿತ ತಾಲೂಕಿನಲ್ಲಿ ಆರ್ಥಿಕವಾಗಿ ಹಿಂದುಳಿದ ಪತ್ರಕರ್ತರು ಹೆಚ್ಚಿದ್ದು, ಅವರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಆದ್ದರಿಂದ ಶಾಸಕರು ನಿವೇಶನ ನೀಡಲು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕೃದ್ದೀನ್, ಉಪಾಧ್ಯಕ್ಷ ಡಿ.ಶ್ರೀನಿವಾಸ್, ಸದಸ್ಯ ಬಿ.ಪಿ.ಸುಭಾನ್, ರಾಷ್ಟ್ರೀಯ ಮಂಡಳಿ ಸದಸ್ಯ ಕೊಟ್ರೇಶ್ ಅಣಬೂರು, ಪ್ರಧಾನ ಕಾರ್ಯದರ್ಶಿ ಲೋಕೇಶ್.ಎಂ. ಐಹೊಳೆ, ಸಾಹಿತಿ ಎರ್ರಿಸ್ವಾಮಿ ಮಾತನಾಡಿದರು.

ನಿವೃತ್ತ ಅಧಿಕಾರಿ ಮಹೇಶ್ವರಪ್ಪ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ನಿವೃತ್ತ ಉಪನ್ಯಾಸಕ ಷಂಷುದ್ದೀನ್, ನಿವೃತ್ತ ಯೋಧ ರಂಗಸ್ವಾಮಿ, ಪತ್ರಕರ್ತರ ಸಂಘದ ಉಪಾಧ್ಯಕ್ಷ ವಾಸೀಂ, ಖಜಾಂಚಿ ಜಗದೀಶ್, ಸಮಿತಿ ಸದಸ್ಯರಾದ ಧನ್ಯಕುಮಾರ್, ಎಚ್.ಬಾಬು, ಒ.ಮಂಜಣ್ಣ, ರಾಜಪ್ಪ, ಪತ್ರಕರ್ತರಾದ ಶಿವಲಿಂಗಪ್ಪ, ಗೋಗುದ್ದು ತಿಪ್ಪೇಸ್ವಾಮಿ, ಜಗಜೀವನ್​ರಾಮ್ ಬಸವರಾಜ್, ಸೋಮನಗೌಡ, ರಕೀಬ್, ಮಾರಪ್ಪ, ಜಗದೀಶ್, ಮಾರುತಿ, ಮಹಾಂತೇಶ್, ಸತೀಶ್ ಇತರರಿದ್ದರು.

ಪತ್ರಿಕಾ ಭವನ ಶೀಘ್ರ ಪೂರ್ಣ

ಪಟ್ಟಣದ ವಿದ್ಯಾನಗರದಲ್ಲಿ ಅನುದಾನ ಕೊರತೆಯಿಂದ ನೆನಗುದಿಗೆ ಬಿದ್ದಿರುವ ಪತ್ರಿಕಾ ಭವನ ಕಟ್ಟಡವನ್ನು ಆದಷ್ಟು ಬೇಗ ಅನುದಾನ ನೀಡಿ ಪೂರ್ಣಗೊಳಿಸಲಾಗುವುದು. ಹಂತ ಹಂತವಾಗಿ ಅದಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಭರವಸೆ ನೀಡಿದರು.

ಪತ್ರಕರ್ತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೇರಿ ಅಗತ್ಯ ಸೌಕರ್ಯಗಳನ್ನು ನೀಡಲು ಚಿಂತನೆ ನಡೆಸಲಾಗಿದೆ. ಪತ್ರಕರ್ತರ ನಿವೇಶನ ಸೇರಿ ಇತರ ಸೌಲಭ್ಯಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net