ಜಗಳೂರು ಸೌಂದಯೀಕರಣಕ್ಕೆ ಒತ್ತು

01 jlr
Published on

ಜಗಳೂರು: ಮುಖ್ಯರಸ್ತೆ ವಿಸ್ತರಣೆ, ಉದ್ಯಾನವನ, ಕೆರೆ ಅಭಿವೃದ್ಧಿ ಸೇರಿ ಪಟ್ಟಣದ ಸೌಂದಯೀಕರಣಕ್ಕೆ ಒತ್ತು ನೀಡಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಸರ್ಕಾರಿ ನೌಕರರ ಸಂಘದ ಕಟ್ಟಡ ಕಾಮಗಾರಿಗೆ ಪಟ್ಟಣದಲ್ಲಿ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ಬೈಪಾಸ್​ವರೆಗೆ ರಸ್ತೆ ವಿಸ್ತರಣೆ ಮಾಡಿ ಹೈಟೆಕ್ ವಿದ್ಯುತ್ ದೀಪ ಅಳವಡಿಸಲಾಗುವುದು ಎಂದರು.

ತಾಲೂಕು ಆಸ್ಪತ್ರೆಯಿಂದ ಹೊರಕೆರೆ ಮಾರ್ಗವಾಗಿ ಕೊಟ್ಟೂರು ರಸ್ತೆಯವರೆಗೆ ಸಿಸಿ ರಸ್ತೆ ಮಾಡಲಾಗಿದ್ದು, ಅಂಬೇಡ್ಕರ್ ಭವನದ ರಸ್ತೆ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಪಪಂ ನಿಂದ ಎಲ್ಲ ವಾರ್ಡ್​ಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಮಾಡಲಾಗುವುದು.

ಸರ್ಕಾರಿ ಆಸ್ಪತ್ರೆ ನಿರ್ವಣಕ್ಕೆ ಸರ್ಕಾರ ಬಜೆಟ್​ನಲ್ಲಿ 50 ಲಕ್ಷ ರೂ. ಘೊಷಿಸಿದೆ. ಬಿಡುಗಡೆಯಾದ ಕೂಡಲೇ ಗುಣಮಟ್ಟದ ಹಾಗೂ ಸುಸಜ್ಜಿತ ಕಟ್ಟಡ ನಿರ್ವಿುಸಿ ಸಾರ್ವಜನಿಕರ ಸೇವೆಗೆ ನೀಡಲಾಗುವುದು. ವಿದ್ಯಾರ್ಥಿಗಳಿಗಾಗಿ ಜನ ಸಂಪರ್ಕ ಕಚೇರಿಯಲ್ಲಿ ಹೈಟೆಕ್ ಗ್ರಂಥಾಲಯ ಮತ್ತು ಬಾಲ ಗ್ರಂಥಾಲಯ ಮಾಡಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್.ಎಲ್. ತಿಪ್ಪೇಸ್ವಾಮಿ, ಕಾರ್ಯದರ್ಶಿ ರುದ್ರೇಶ್, ಮಾಜಿ ಕಾರ್ಯದರ್ಶಿ ನಾಗರಾಜ್, ರುದ್ರೇಶ್, ಶಿಕ್ಷಕರಾದ ಕಲಿನಾಥ್, ವೀರೇಶ್, ತಾಲೂಕು ಆರೋಗ್ಯ ಇಲಾಖೆಯ ಉಮೇಶ್, ಮೀನಾಕ್ಷಿ, ತಾಪಂ ವ್ಯವಸ್ಥಾಪಕ ರವಿ ಕುಮಾರ್, ನಿವೃತ್ತ ಅಧಿಕಾರಿ ಬಿ. ಮಹೇಶ್ವರಪ್ಪ, ಎಂ.ಎಸ್. ಪಟೇಲ್, ಗೋಡೆ ಪ್ರಕಾಶ್ ಸೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net