25ರಂದು ಕೊಳ್ಳೇಗಾಲದಲ್ಲಿ ಶಾಸಕ ಎಆರ್‌ಕೆಗೆ ಸನ್ಮಾನ

A.R.Krishnmurthy
ಶಾಸಕ ಎ.ಆರ್.ಕೃಷ್ಣಮೂರ್ತಿ
Published on

ಕೊಳ್ಳೇಗಾಲ: ಪಟ್ಟಣದ ಭೀಮನಗರದ ಮಾತೆ ಸಾವಿತ್ರಿ ಬಾಯಿಫುಲೆ ವೇದಿಕೆಯಲ್ಲಿ ಸೆ.25ರಂದು ಸಂಜೆ 5.30 ಗಂಟೆಗೆ ಭೀಮನಗರ ನಿವಾಸಿಗಳಿಂದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಭೀಮನಗರದ ಹೊಸಬೀದಿ ನಿವಾಸಿ ದಿ.ಮಹದೇವಮ್ಮ ಮತ್ತು ದಿ.ಶಾಂತರಾಜು ಅವರ ಸ್ಮರಣಾರ್ಥ ಚಿರಶಾಂತಿ ವಾಹನದ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ವಹಿಸಲಿದ್ದಾರೆ. ಕೊಡಗು ಜಿಲ್ಲೆಯ ಎಎಸ್ಪಿ ಕೆ.ಎಸ್.ಸುಂದರ್ ರಾಜ್ ಕಾರ್ಯಕ್ರಮ ಉದ್ಘಾಟಿಸುವರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಎಸ್.ಆನಂದಮೂರ್ತಿ ಚಿರಶಾಂತಿ ವಾಹನ ಸಮರ್ಪಣೆ ಮಾಡಲಿದ್ದಾರೆ.

ಮಾಜಿ ಶಾಸಕ ಎಸ್.ಜಯಣ್ಣ, ಜಿ.ಎನ್.ನಂಜುಂಡಸ್ವಾಮಿ, ಬೆಂಗಳೂರಿನ ಸಿಐಡಿ ಎಸಿಪಿ ಎಚ್.ಕೆ.ಮಹಾನಂದ್, ತೋಟಗಾರಿಕೆ ಇಲಾಖೆ ನಿರ್ದೇಶಕ ಎಚ್.ಶಶಿಧರ್, ನಾಗ್ಪುರ್ ಕಸ್ಟಮ್ ಸಹಾಯಕ ಆಯುಕ್ತ ಮಹೇಶ್ ಕುಮಾರ್, ಉಪನ್ಯಾಸಕ ಸುಂದರಮೂರ್ತಿ, ಯಳಂದೂರು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಎಚ್.ಶ್ರೀಧರ್, ಸರ್ಕಾರಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸ ತಜ್ಞ ಎನ್.ಬಸವರಾಜು, ವೈದ್ಯಾಧಿಕಾರಿ ಎಲ್.ಅಮರ್, ಭಾರತೀಯ ಸೇನೆ ವೈದ್ಯಾಧಿಕಾರಿ ಎಲ್.ಅರುಣ್, ನಿವೃತ್ತ ಉಪನ್ಯಾಸಕ ಎಂ.ವಿಜಯ್ ಕುಮಾರ್, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಪಿ.ಸೋಮಶೇಖರ್, ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಸಿ.ಎನ್.ರೇಖಾ ರಮೇಶ್, ಸದಸ್ಯ ಎಸ್.ಮಂಜುನಾಥ್, ಮಾನಸಾ ಪ್ರಭುಸ್ವಾಮಿ, ಕವಿತಾ ರಾಜೇಶ್, ಭಾಗ್ಯಾ ಸೋಮಣ್ಣ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net