ಸಂಜೀವಿನಿಯಿಂದ ಮಹಿಳೆಯರಿಗೆ ಅನುಕೂಲ

Untitled design(15)
ಸಂಡೂರಿನ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಸಂಜೀವಿನಿಯಡಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶಾಸಕಿ ಅನ್ನಪೂರ್ಣ ತುಕಾರಾಮ್ ಚಾಲನೆ ನೀಡಿದರು. ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಇಒ ಮಡಗಿನ ಬಸಪ್ಪ, ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷೆ ಆಶಾಲತಾ ಸೋಮಪ್ಪ, ಸಿಡಿಪಿಒ ಪಿ.ನಾಗರಾಜ ಇದ್ದರು.
Published on

ಸಂಡೂರು: ಪಟ್ಟಣದ ಆಸ್ಪತ್ರೆ ಮುಂಭಾಗದಲ್ಲಿ ಸಂಜೀವಿನಿಯಡಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶಾಸಕಿ ಅನ್ನಪೂರ್ಣ ತುಕಾರಾಮ್ ಶುಕ್ರವಾರ ಚಾಲನೆ ನೀಡಿದರು.

ಮಹಿಳೆಯರು ಮನೆಯಲ್ಲಿಯೇ ತಯಾರಿಸಿದ ಆಹಾರೋತ್ಪನ್ನಗಳು ಮತ್ತು ಲಂಬಾಣಿ ಕಸೂತಿ ಉತ್ಪನ್ನಗಳು, ಅಗರಬತ್ತಿ, ಇತರ ಆಹಾರೇತರ ಉತ್ಪನ್ನಗಳ ಮಾರಾಟಕ್ಕಾಗಿ ದೀಪ ಸಂಜೀವಿನಿಯಡಿ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮಹಿಳೆಯರಿಗೆ ಅನುಕೂಲವಾಗಲಿದೆ. ಬೆಣ್ಣೆ ಬಿಸ್ಕಿಟ್, ಪಾಪಡ್, ಚಕ್ಕುಲಿ, ನಿಬ್ಬೇಟ್, ಶಂಕರಪಾಳ್ಯ, ಸ್ವೀಟ್ಸ್, ದೀಪದ ಪ್ರಣತಿಗಳು, ಲಂಬಾಣಿ ಉಡುಪುಗಳು, ಸ್ಕೂಲ್ ಬ್ಯಾಗ್ಸ್, ಕೃತಕ ಆಭರಣಗಳು ಸೇರಿದಂತೆ ವಿವಿಧ ಬಗೆಯ ಉತ್ಪನ್ನಗಳು ಮಾರಾಟಕ್ಕೆ ಇಡಲಾಗಿದೆ ಎಂದರು.

ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಇಒ ಮಡಗಿನ ಬಸಪ್ಪ ಆಗಮಿಸಿ ಉತ್ಪನ್ನಗಳನ್ನು ಖರೀದಿಸಿ ಮಹಿಳೆಯರನ್ನು ಪ್ರೋತ್ಸಾಹಿಸಿದರು. ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷೆ ಆಶಾಲತಾ ಸೋಮಪ್ಪ, ಸಿಡಿಪಿಒ ಪಿ.ನಾಗರಾಜ, ಎನ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸೋಮಶೇಖರ ಕಲ್ಡಳ್ಳಿ, ಪುರಸಭೆ ಎನ್‌ಯುಎಲ್‌ಎಂ ಯೋಜನಾಧಿಕಾರಿ ಪ್ರಭುರಾಜ, ಕೃಷಿಯೇತರ ಜೀವನೋಪಾಯ ವ್ಯವಸ್ಥಾಪಕಿ ಪದ್ಮಜಾ, ರೋಷನ್ ಜಮೀರ್, ವಲಯ ಮೇಲ್ವಿಚಾರಕರಾದ ರುದ್ರಪ್ಪ, ಕರಿಬಸಪ್ಪ, ಅನಿತಾ, ಶಕುಂತಲಾ, ಅನಿತಾ, ಶ್ರೀದೇವಿ, ಮಂಜುಳ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net