ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಶಾಸಕ

17 vpt. 2.3
ಅಗ್ನಿ ಅನಾಹುತ ಸಂಭವಿಸಿದ್ದ ಲೋಕೊಪಯೋಗಿ ಇಲಾಖೆ ವಸತಿ ಗೃಹವನ್ನು ಶಾಸಕ ಎ. ಎಸ್ ಪೊನ್ನಣ್ಣ ಪರಿಶೀಲಿಸಿದರು. ರಂಜಿ ಪೂಣಚ್ಚ, ದೇಚಮ್ಮ, ಫಸಿಹಾ ತಬುಸುಮ್, ನಾಚಪ್ಪ ಇದ್ದರು.
Published on

ವಿರಾಜಪೇಟೆ : ವಿರಾಜಪೇಟೆ ಪುರಸಭಾ ವ್ಯಾಪ್ತಿಯ ಸುಣ್ಣದ ಬೀದಿ ವಾರ್ಡ್‌ಗೆ ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ಎ.ಎಸ್.ಪೊನ್ನಣ್ಣ ಅವರು ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ಸುಣ್ಣದ ಬೀದಿ ವಾರ್ಡ್‌ನಲ್ಲಿರುವ ಸೇತುವೆ ಬದಿಯಲ್ಲಿ ಕುಸಿತ ಸಂಭವಿಸುವ ಸಾಧ್ಯತೆ ಇದ್ದು, ಇದಕ್ಕೆ ತಡೆಗೋಡೆ ನಿರ್ಮಿಸುವ ಕುರಿತು ಪರಿಶೀಲಿಸಿ, ಇದಕ್ಕೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. ವಾರ್ಡ್ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು. ನಂತರ ಜನರ ಅಹವಾಲುಗಳನ್ನು ಆಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದರು.

ಬಳಿಕ ತಾಲೂಕು ಕಚೇರಿಯ ಬಳಿ ಇರುವ ಸಾರ್ವಜನಿಕ ಗ್ರಂಥಾಲಯ, ಗಣಪತಿ ದೇವಾಲಯದ ಹಿಂಭಾಗ ಇತ್ತೀಚೆಗೆ ಅಗ್ನಿ ಅವಘಡ ಸಂಭವಿಸಿದ ಲೋಕೋಪಯೋಗಿ ಇಲಾಖೆಯ ವಸತಿ ಗೃಹಕ್ಕೆ ತೆರಳಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಉಪಾಧ್ಯಕ್ಷ ಫಸಿಹಾ ತಬಸುಮ್, ಸ್ಥಳೀಯ ವಾರ್ಡ್ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಜಲೀಲ್, ಮುಖ್ಯಾಧಿಕಾರಿ ನಾಚಪ್ಪ, ಸದಸ್ಯರಾದ ಮತೀನ್, ಶಾಹುಲ್ ಹಮೀದ್, ಪೃಥ್ವಿನಾಥ್, ಅತಿಫ್ ಮುನ್ನ, ಯುವ ಕಾಂಗ್ರೆಸ್ ಪ್ರಮುಖರಾದ ಶಬೀರ್, ಪಕ್ಷದ ಪ್ರಮುಖರಾದ ಜೋಕಿಮ್, ಹರೀಶ್, ಮಂಜು ದೇವಯ್ಯ, ಮಂಜುನಾಥ್,ಅಯೂಬ್ ಹಾಗೂ ಪ್ರಮುಖರು, ಸ್ಥಳೀಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net