ಮಳೆ ಪೀಡಿತ ಪ್ರದೇಶಕ್ಕೆ ಶಾಸಕ ಅಬ್ಬಯ್ಯ ಭೇಟಿ

h26-abbayya 1
Published on

ಹುಬ್ಬಳ್ಳಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಇಲ್ಲಿನ ಪೂರ್ವ ವಿಧಾನಸಭೆ ಕ್ಷೇತ್ರದ ವಿವಿಧೆಡೆ ಮನೆಗಳು ಬಿದ್ದಿದ್ದು, ಶಾಸಕ ಪ್ರಸಾದ ಅಬ್ಬಯ್ಯ ಮಂಗಳವಾರ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದರು.

ನಗರದ ಮಸ್ತಾನ ಸೋಫಾ, ಅಕ್ಕಿಪೇಟೆ, ಬಾಗಾರಪೇಟೆ ಸೇರಿ ವಿವಿಧೆಡೆ ಮಂಗಳವಾರ ಭೇಟಿ ನೀಡಿ, ಸಂತ್ರಸ್ಥರಿಗೆ ಆತ್ಮವಿಶ್ವಾಸ ತುಂಬಿದರು. ಮನೆಗಳು ಬಿದ್ದಿರುವ ಸಮಗ್ರ ವರದಿ ಸಿದ್ಧಪಡಿಸಿ, ಶೀಘ್ರವೇ ಸರ್ಕಾರಕ್ಕೆ ಕಳುಹಿಸಬೇಕು. ಸರ್ಕಾರದಿಂದ ಪರಿಹಾರ ಧನವನ್ನು ಕೊಡಿಸುವ ಕಾರ್ಯವಾಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಚರಂಡಿ ಹಾಳಾಗಿದ್ದು, ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ಬಗ್ಗೆ ನಿವಾಸಿಗಳು, ಶಾಸಕರ ಗಮನಕ್ಕೆ ತಂದರು. ಸಮಸ್ಯೆ ಆಲಿಸಿದ ಶಾಸಕರು, ಈಗಾಗಲೇ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಬಾಕಿ ಉಳಿದ ರಸ್ತೆ, ಚರಂಡಿ ಸೇರಿ ಇನ್ನುಳಿದ ಸೌಕರ್ಯಗಳನ್ನು ಶೀಘ್ರದಲ್ಲೇ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ನೆಮ್ಮದಿ ಜೀವನ: ಪೂರ್ವ ಕ್ಷೇತ್ರ ಕೊಂಚ ತಗ್ಗು ಪ್ರದೇಶವಾದ್ದರಿಂದ ಈ ಹಿಂದೆ ಸ್ವಲ್ಪ ಮಳೆಯಾದರೂ ದೊಡ್ಡಮಟ್ಟದಲ್ಲಿ ಪರಿಣಾಮ ಬೀರುತ್ತಿತ್ತು. ಆದರೆ, ರಾಜ ಕಾಲುವೆಗೆ ತಡೆಗೋಡೆ, ಚರಂಡಿ ನಿರ್ವಣ, ಸುಸಜ್ಜಿತ ರಸ್ತೆ ಸೇರಿ ಮೂಲ ಸೌಕರ್ಯ ಒದಗಿಸಲು ಸಾವಿರಾರು ಕೋಟಿ ರೂ. ತಂದು ಅಭಿವೃದ್ಧಿ ಪಡಿಸಲಾಗಿದೆ. ಹೀಗಾಗಿ ಮಳೆ ಬಂದರೂ ಕ್ಷೇತ್ರದ ಜನರು ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದು ಶಾಸಕ ಅಬ್ಬಯ್ಯ ಹೇಳಿದರು.

ತಹಸೀಲ್ದಾರ್ ಆರ್.ಕೆ. ಪಾಟೀಲ, ಕಸಬಾಪೇಟೆ ಪೊಲೀಸ್​ಠಾಣೆ ಇನ್​ಸ್ಪೆಕ್ಟರ್ ರಾಘವೇಂದ್ರ ಹಳ್ಳೂರು, ವಲಯ ಆಯುಕ್ತ ಬಸವರಾಜ ಲಮಾಣಿ, ಕಂದಾಯ ಅಧಿಕಾರಿ ರವಿ ಬೆನ್ನೂರು, ಕಾಂಗ್ರೆಸ್ ಮುಖಂಡರಾದ ಮುನ್ನಾ ಮಾರ್ಕರ್, ಬಸವರಾಜ ಮೆಣಸಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net