ವ್ಯಾಪಾರ ವಹಿವಾಟು ಹಾಳು ಮಾಡಬೇಡಿ, ಶಾಸಕ ಪ್ರಸಾದ ಅಬ್ಬಯ್ಯ ಮನವಿ

IMG-20240103-WA0034.jpg
Published on

ಹುಬ್ಬಳ್ಳಿ: ಶ್ರೀಕಾಂತ ಪೂಜಾರಿ ಅವರ ಮೇಲೆ ಹಲವು ಕೇಸ್ ಗಳಿವೆ. ಪೊಲೀಸ್ ಇಲಾಖೆಯು ನಿರಂತರ ಪ್ರಕ್ರಿಯೆ ಅಡಿ ಅವರನ್ನು ಬಂಧಿಸಿದೆ. ಇದನ್ನೇ ಮುಂದಿಟ್ಟುಕೊಂಡು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಇಲಾಖೆಯು ಡಿಸೆಂಬರ್ ತಿಂಗಳು ವಿಶೇಷ ಕಾರ್ಯಾಚರಣೆ ನಡೆಸಿ ಎಲ್ಪಿಎಸ್ ಪ್ರಕರಣ ಅಂತ್ಯಗೊಳಿಸುತ್ತಿದೆ. ಆದರೆ, ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗ ತಮ್ಮವರನ್ನು ಬಂಧಮುಕ್ತಗೊಳಿಸದೇ ಹಾಗೆ ಬಿಟ್ಟದ್ದು ಏಕೆ? ಎಂದು ಪ್ರಶ್ನಿಸಿದರು.

ರಾಮ ಮಂದಿರ ಉದ್ಘಾಟನೆ ಸಂದರ್ಭವೆಂದು ಕ್ರಿಮಿನಲ್ ಗಳನ್ನು ಹಾಗೆ ಬಿಡಬೇಕೆ? ನಾನೂ ಕೂಡ ಹಿಂದುವಾಗಿದ್ದೇನೆ. ಎಲ್ಪಿಎಸ್ ಪ್ರಕರಣಗಳಲ್ಲಿ ಮುಸ್ಲಿಮರೂ ಇದ್ದಾರೆ. ಆರ್. ಅಶೋಕ ಅವರು ರೌಡಿಶೀಟರ್ ಪರ ಬಂದು ಇಲ್ಲಿ ಹೋರಾಟ ಮಾಡಿ ಹುಬ್ಬಳ್ಳಿಯ ವ್ಯಾಪಾರ, ಉದ್ಯಮ ಅಭಿವೃದ್ಧಿ ಹಾಳು ಮಾಡಬಾರದು ಎಂದು ಶಾಸಕರು ಮನವಿ ಮಾಡಿದರು.

ಈ ಹಿಂದೆ ಈದ್ಗಾ ಮೈದಾನ ಹೋರಾಟ ಮಾಡಿ ಎಷ್ಟೋ ವರ್ಷ ಹುಬ್ಬಳ್ಳಿ ಅಭಿವೃದ್ಧಿ ಆಗದೇ ಆಥಿರ್ಕ ಹಿನ್ನಡೆ ಆಗಿತ್ತು. ಈಗಲೂ ಆ ರೀತಿ ಮಾಡಬೇಡಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net