

ಮಂಡ್ಯ: ಸಚಿವ ಜಮೀರ್ ಅಹಮದ್ ಖಾನ್ ಮಾತನಾಡುವ ಭಾಷೆ ಬದಲಿಸಿಕೊಳ್ಳಬೇಕು. ಆತನ ಮಾತು ಅವರ ಕ್ಷೇತ್ರಕ್ಕೆ ಮಾತ್ರ ಹೊಂದುವಂತಹ ಪದ ಬಳಕೆ ಮಾಡಿದ್ದು, ಒಕ್ಕಲಿಗ ಸಮುದಾಯದ ಬಗ್ಗೆ ಮಾತನಾಡಿರುವುದು ಒಳ್ಳೆಯ ಬೆಳವಣಿಗೆ ಎಂದು ಅರಕಲಗೂಡು ಶಾಸಕ ಎ.ಮಂಜು ಎಚ್ಚರಿಸಿದರು.
ದೇವೇಗೌಡರು ಜಮೀರ್‌ಅಹಮದ್ ಅವರನ್ನು ಶಾಸಕರನ್ನಾಗಿ ಮಾಡಿದರು. ಈ ಕೆಲಸ ಆಗದಿದ್ದರೆ, ಅವರು ಇಂದು ಶಾಸಕ, ಸಚಿವರಾಗುವ ಅವಕಾಶ ದೊರೆಯುತ್ತಿರಲಿಲ್ಲ. ಅವರ ಮೂಲ ಕಸುಬಿನಲ್ಲೇ ಉಳಿಯುತ್ತಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಂದು ಇಬ್ರಾಹಿಂ ಸೇರಿದಂತೆ ಹಲವು ಮುಸಲ್ಮಾನ್ ಮುಖಂಡರಿದ್ದರು. ಆದರೆ ಅವರನ್ನ ಮೀರಿ ಬೆಳೆಯುವಂತೆ ಮಾಡಿದ್ದು ದೇವೇಗೌಡರು ಹಾಗೂ ಅವರ ಕುಟುಂಬ ಎನ್ನುವುದನ್ನು ಮರೆಯಬಾರದು. ಆಗಿರುವುದನ್ನು ನೆನಪು ಮಾಡಿಕೊಳ್ಳುವ ಪ್ರೌವೃತ್ತಿ ಬೆಳೆಸಿಕೊಳ್ಳಬೇಕು. ಗೌಡರ ಬಗ್ಗೆ ಮಾತನಾಡುವ ಚಪಲ ಜಮೀರ್ ಅವರಿಗಿದೆ. ನಮ್ಮ ಸಮುದಾಯದ ಬಗ್ಗೆ ಅಗೌರವವಾಗಿ ಮಾತುಗಳನ್ನಾಡಿರುವುದು ನೋವು ಎಂದಿದೆ ಎಂದರು.
ದೇವೇಗೌಡರ ಕುಟುಂಬವನ್ನು ಖರೀದಿ ಮಾಡುತ್ತೇನೆ. ಸಮುದಾಯದ ನಾಯಕರನ್ನು ಖರೀದಿ ಮಾಡುತ್ತೇನೆ ಎಂದು ಹೇಳುವಂತಹದ್ದು ಬಾರಿ ನೋವು ತಂದಿದೆ. ಇಂತಹ ಮಾತುಗಳು ಖಂಡನೀಯ. ಭಗವಂತ ಅಪ್ಪಿತಪ್ಪಿ ಅವಕಾಶ ನೀಡಿದ್ದು, ಒಳ್ಳೆಯ ಮಾತನಾಡುವುದನ್ನು ಕಲಿಯಿರಿ ಎಂದು ತಿಳಿ ಹೇಳಿದರು.
ಮುಖಂಡರಾದ ಅರವಿಂದ್, ಮಧುಸೂಧನ್, ನಾಗೇಶ್ ಇದ್ದರು.