ಪಾವಗಡದಲ್ಲಿ ತುಂಗಭದ್ರಾ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ವೀಕ್ಷಿಸಿದ ಶಾಸಕ ವೆಂಕಟರವಣಪ್ಪ

30 PVG MLA
Published on

ಪಾವಗಡ : ಪಟ್ಟಣದ ಚಳ್ಳಕೆರೆ ಕ್ರಾಸ್‌ನಿಂದ ತುಮಕೂರು ರಸ್ತೆಯ ಶೃಂಗೇರಿ ಶಾಲೆಯವರೆಗೂ ತುಂಗಭದ್ರಾ ಕುಡಿಯುವ ನೀರು ಯೋಜನೆಯ ಪೈಪ್‌ಲೈನ್ ಕಾಮಗಾರಿಗೆ ಇಂಜಿನಿಯರ್‌ಗಳು ಶನಿವಾರ ವೆಂಕಟರವಣಪ್ಪ ಸಮ್ಮುಖದಲ್ಲಿ ಸರ್ವೇ ನಡೆಸಿದರು.

ನೀರಿನ ಸೌಲಭ್ಯ ಕಲ್ಪಿಸಲು 2,352 ಕೋಟಿ ರೂಪಾಯಿ ವೆಚ್ಚದಲ್ಲಿ ಹೈದ್ರಾಬಾದ್‌ನ ಮೆಗಾ ಕಂಪನಿ ಗುತ್ತಿಗೆ ಪಡೆದುಕೊಂಡಿದ್ದು, ಕೂಡ್ಲಗಿಯಿಂದ ಪಾವಗಡ ತಾಲೂಕಿಗೆ ಪೈಪ್‌ಲೈನ್ ಮೂಲಕ ನೀರು ಹಾಯಿಸುವ ಕಾಮಗಾರಿ ಎರಡು ವರ್ಷಗಳಿಂದ ನಡೆಯುತ್ತಿದ್ದು, ತಾಲೂಕಿನ ಗ್ರಾಮಗಳಿಗೂ ತುಂಗಭದ್ರಾ ಯೋಜನೆಯ ನೀರು ಹರಿಸಲು ಸಮಗ್ರ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಉಸ್ತುವಾರಿ ವಹಿಸಿಕೊಂಡಿದೆ.

ಪಟ್ಟಣದಿಂದ ರಾಜವಂತಿ ಗ್ರಾಮಕ್ಕೆ ಸಂಪರ್ಕಿಸುವ ಪೈಪ್‌ಲೈನ್ ಕಾಮಗಾರಿಗೆ ಕೆಶಿಪ್ ಅಧಿಕಾರಿಗಳು ರಸ್ತೆ ಅಗೆದು ಕಾಮಗಾರಿ ನಡೆಸುವುದರಿಂದ 2.05 ಕೋಟಿ ರೂಪಾಯಿ ಕಟ್ಟಬೇಕು ಎಂದು ಸೂಚಿಸಿದ್ದರಿಂದ ಪಟ್ಟಣದಲ್ಲಿ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಕೊನೆಗೂ ಗ್ರಾಮೀಣ ಕುಡಿಯುವ ನೀರು ವಿಭಾಗದಿಂದ 1.5 ಕೋಟಿ ರೂ.ಗಳಚ್ನು ಕೆಶಿಪ್‌ಗೆ ಸಲ್ಲಿಸಿದ್ದರೂ ಅಧಿಕಾರಿಗಳು ಕ್ಯಾತೆ ತೆಗೆಯುತ್ತಿದ್ದರಿಂದ ಶಾಸಕರು ಆಗಮಿಸಿ ಸರ್ವೇ ವೀಕ್ಷಿಸಿದರು.

ಪಟ್ಟಣದಲ್ಲಿ ಅವೈಜ್ಞಾನಿಕ ರಸ್ತೆ ನಿರ್ವಾಣದಿಂದ ಮಳೆ ನೀರು ಸರಾಗವಾಗಿ ಹರಿಯದೆ ಪೊಲೀಸ್ ಠಾಣಾ ಅವರಣ, ವಿನಾಯಕ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿದೆ. ತುಂಗಭದ್ರಾ ಪೈಪ್‌ಲೈನ್ ಕಾಮಗಾರಿ ಮುಗಿದ ನಂತರ ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ಅವ್ಯವಸ್ಥೆ ಸರಿಪಡಿಸಬೇಕು ಎಂದು ಕೆಶಿಫ್ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಸರ್ವೇ ವಾಡುವಾಗ ಕೆಲ ಅಂಗಡಿಗಳು ರಸ್ತೆ ಒತ್ತುವರಿ ವಾಡಿಕೊಂಡಿರುವುದನ್ನು ಗಮನಿಸಿದ ಶಾಸಕ, ಒತ್ತುವರಿ ತೆರವುಗೊಳಿಸಲು ಅಂಗಡಿ ವಾಲೀಕರಿಗೆ ತಿಳಿಸಿದರು. ಹೂಳು ತುಂಬಿ ದುರ್ವಾಸನೆ ಬೀರುತ್ತಿದ್ದ ಚರಂಡಿಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಿ ಎಂದು ಪುರಸಭೆ ಮುಖ್ಯಾಧಿಕಾರಿ ಬಿ.ಸಿ.ಅರ್ಚನಾಗೆ ತಾಕೀತು ವಾಡಿದರು.

ಪುರಸಭೆ ವಾಜಿ ಅಧ್ಯಕ್ಷ ಎ.ಶಂಕರರೆಡ್ಡಿ, ಮೆಗಾ ಗುತ್ತಿಗೆ ಕಂಪನಿ ಮುಖ್ಯ ಇಂಜಿನಿಯರ್ ವಿಜಯಕುವಾರರೆಡ್ಡಿ, ಗ್ರಾಮೀಣ ಕುಡಿಯುವ ನೀರು ವಿಭಾಗದ ಎಇಇ ಹನುಮಂತರಾಯಪ್ಪ, ಇಂಜಿನಿಯರ್ ಬಸವಲಿಂಗಪ್ಪ, ಪುರಸಭೆ ಇಂಜಿನಿಯರ್ ಅರುಣ್‌ಕುವಾರ್, ಮುಖಂಡರಾದ ಪ್ರಮೋದ್ ಕುವಾರ್, ಕೋಳಿಬಾಲಾಜಿ, ಗುತ್ತಿಗೆದಾರ ಹನುಮಂತರಾಯಪ್ಪ, ಎ.ಕಿರಣ್‌ಕುವಾರ್, ಕೆಶಿಪ್, ಗ್ರಾಮೀಣ ಕುಡಿಯುವ ನೀರು ಇಲಾಖೆ ಹಾಗೂ ಮೆಗಾ ಗುತ್ತಿಗೆ ಕಂಪನಿಯ ಇಂಜಿನಿಯರ್‌ಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net