ಯಾರಿಗೂ ಅನ್ಯಾಯ ಮಾಡಿಲ್ಲ -  ಶಾಸಕ ಅಶೋಕ್ ಕುಮಾರ್ ರೈ ಸ್ಪಷ್ಟನೆ

Published on

ಪುತ್ತೂರು: ಗಡಿಪಾರು ಮಾಡಿ ಏನೂ ಪ್ರಯೋಜನವಿಲ್ಲ ಮತ್ತು ಯಾರಿಗೂ ಅನ್ಯಾಯ ಮಾಡಿಲ್ಲ, ಮಾಡುವವನೂ ಅಲ್ಲ. ಅಂತ ಕೀಳುಮಟ್ಟದ ಕೆಲಸವನ್ನು ಮಾಡುವವನೂ ಅಲ್ಲ. ಯಾರಿಗಾದರೂ ನೇರವಿನ ಅಗತ್ಯವಿದ್ದರೆ ಅದನ್ನು ಮಾಡಿದ್ಡೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಯಾರನ್ನೂ ದ್ವೇಷ ಮಾಡಿಲ್ಲ, ವಿರೋಧ ಮಾತನಾಡಿದರೂ ಅವರಿಗೆ ಉತ್ತರ ನೀಡುವ ಕೆಲಸಕ್ಕೆ ಹೋಗಿಲ್ಲ. ನನ್ನ ಆತ್ಮರಕ್ಷಣೆಗೆ ಬಂದೂಕು ಇದ್ದು, ಆತ್ಮ ರಕ್ಷಣೆಯ ವಿಚಾರ ಬರುವ ಸಂದರ್ಭ ಗನ್ ಹಿಡಿಯದೆ, ಪೆನ್ನು ಹಿಡಿಯಬೇಕಾ? ಪೆನ್ನು ಹಿಡಿಯಲಿಕ್ಕೂ ಗೊತ್ತು, ಗನ್ ಹಿಡಿಯುವುದಕ್ಕೂ ಗೊತ್ತಿದೆ. ಯಾರಿಗೆ ಯಾವ ರೀತಿ ಬುದ್ಧಿ ಕಲಿಸಬೇಕು ಎಂಬುದು ಅಶೋಕ್ ರೈಗೆ ಗೊತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಜನರು ಸುರಕ್ಷಿತವಾಗಿರಬೇಕಾಗಿದ್ದು, ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡಬೇಕು. ನೂತನವಾಗಿ ಬಂದ ಎಸ್.ಪಿ., ಕಮಿಷನರ್ ಕಾನೂನು ಕಾಪಾಡುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವ ಸಂದರ್ಭ ಅದಕ್ಕೆ ವಿರೋಧ ವ್ಯಕ್ತಪಡಿಸಲಾಗುವುದಿಲ್ಲ. ನಾಳೆ ಹೆಚ್ಚು ಕಡಿಮೆಯಾದರೆ, ಶಾಸಕರು ಏನು ಮಾಡುತ್ತಿದ್ದಾರೆಂಬ ಪ್ರಶ್ನೆ ಬರುತ್ತದೆ. ಗಡಿಪಾರಿನಿಂದ ಏನನ್ನೂ ಸಾಧಿಸಲಾಗುವುದಿಲ್ಲ ಎಂದರು.

ಬಿಜೆಪಿ ಸರ್ಕಾರ ಇದ್ದಾಗ ಹಲವರ ಮೇಲೆ ಗೂಂಡಾ ಕಾಯ್ದೆ ಹಾಕಿ ರೌಡಿಶೀಟ್ ತೆರೆಯಲಾಗಿತ್ತು. ಎಲ್ಲ ಸಮುದಾಯಕ್ಕೆ ಸೇರಿದ ೮೫ ಮಂದಿಯ ಮೇಲಿನ ಗೂಂಡಾ ಕಾಯ್ದೆಯನ್ನು ಸರ್ಕಾರಕ್ಕೆ ತಿಳಿಸಿ ತೆಗೆಯುವ ಕಾರ್ಯವಾಗಿದೆ. ಯಾರೊಬ್ಬರ ಗಡಿಪಾರಿನಲ್ಲೂ ಹಸ್ತಕ್ಷೇಪವಿಲ್ಲ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net