ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬನ್ನಿ

10-KGL PHOTO-3,,
Published on

ಕೊಳ್ಳೇಗಾಲ : ಶಿಕ್ಷಣವನ್ನು ಪ್ರಬಲ ಅಸ್ತ್ರವಾಗಿ ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬನ್ನಿ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ತಾಲೂಕಿನ ಹಳೇ ಹಂಪಾಪುರ ಗ್ರಾಮದಲ್ಲಿ ಶುಕ್ರವಾರ ಸುಮಾರು 35ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ಗ್ರಾಮಸ್ಥರೇ ನಿರ್ಮಿಸಲು ಮುಂದಾಗಿರುವ ಡಾ.ಅಂಬೇಡ್ಕರ್ ಪ್ರತಿಮೆ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂವಿಧಾನದ ಮೂಲಕ ನಮಗೆ ಎಲ್ಲ ಹಕ್ಕುಗಳೂ ದೊರೆತಿವೆ. ಈ ಹಿಂದೆ, ಪರಿಶಿಷ್ಟ ಸಮುದಾಯದವರು ಸ್ವಾಭಿಮಾನದ ಬದುಕು ನಡೆಸುವ ಸಲುವಾಗಿ ಓದಿ ಉನ್ನತ ಹುದ್ದೆಗೆ ಸೇರಿದರು. ಪ್ರಸ್ತುತ ಯುವಕರಲ್ಲಿ ಓದುವ ಮನೋಭಾವ ಕಡಿಮೆ ಆಗುತ್ತಿರುವುದರಿಂದ ಪೈಪೋಟಿ ಎದುರಿಸಿ ಉನ್ನತ ಹುದ್ದೆ ಪಡೆಯಲು ಸಾಧ್ಯವಾಗುತ್ತಿಲ್ಲ. ಸಾಮಾಜಿಕ ಹಾಗೂ ಆರ್ಥಿಕವಾಗಿ ಸದೃಢರಾಗಬೇಕೆಂದರೆ ಶಿಕ್ಷಣವನ್ನು ಪ್ರಬಲ ಅಸ್ತ್ರವಾಗಿ ಬಳಸಿಕೊಂಡು ಅಧ್ಯಯನ ಮಾಡಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು.
ಪರಿಶಿಷ್ಟರು ಮುಖ್ಯ ಮಂತ್ರಿಯಾಗಿಲ್ಲ:ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ. ಈ ರಾಜ್ಯದಲ್ಲಿ ವೀರಶೈವರು 16 ಬಾರಿ, ಒಕ್ಕಲಿಗರು 9 ಬಾರಿ ಮುಖ್ಯ ಮಂತ್ರಿಗಳಾಗಿದ್ದಾರೆ. ಇದಕ್ಕೆ ಖುಷಿ ಪಡುತ್ತೇನೆ. ಆದರೆ, ರಾಜ್ಯದ ಒಬ್ಬಪರಿಶಿಷ್ಟ ಸಮುದಾಯದ ವ್ಯಕ್ತಿ ಮುಖ್ಯಮಂತ್ರಿ ಆಗಿಲ್ಲ. ಪ್ರಧಾನಿ ಆಗಲು ಸಾಧ್ಯವಾಗಿಲ್ಲ. ಹಾಗಿದ್ದಾಗ ಎಲ್ಲೆಡೆ ಪುತ್ಥಳಿ, ಪ್ರತಿಮೆ ನಿರ್ಮಾಣ ಮಾಡಿ ಏನು ಮಾಡುತ್ತೀರಾ ಎಂದು ಜ್ಞಾನ ಪ್ರಕಾಶ ಸ್ವಾಮೀಜಿ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net