ಅಧ್ಯಕ್ಷರಾಗಿ ಎಂ.ಕೆ.ಶ್ರೀನಿವಾಸ್ ಅವಿರೋಧ ಆಯ್ಕೆ

01M.D.R.6.....
Published on

ಮದ್ದೂರು: ತಾಲೂಕಿನ ಮರಳಿಗ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಎಂ.ಕೆ.ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾದರು.


ಹಿಂದಿನ ಅಧ್ಯಕ್ಷರಾಗಿದ್ದ ಪುಟ್ಟಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಎಂ.ಕೆ.ಶ್ರೀನಿವಾಸ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯನ್ನು ಚುನಾವಣಾಧಿಕಾರಿ ಸಂತೋಷ್ ಘೋಷಿಸಿದರು.


ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಕೆ.ಶ್ರೀನಿವಾಸ್ ಅವರು ಗ್ರಾಮಸ್ಥರು ಮತ್ತು ಸಂಘದ ನಿರ್ದೇಶಕರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಮಾರ್ಗದರ್ಶನದಲ್ಲಿ ರೈತರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸಲಾಗುವುದು. ಸಕಾಲಕ್ಕೆ ರೈತರಿಗೆ ಹಾಲಿನ ಹಣ, ಜಾನುವಾರುಗಳಿಗೆ ಮೇವು, ಗುಣಮಟ್ಟದ ಹಾಲು ಪೂರೈಕೆಗೆ ಆದ್ಯತೆ ಸೇರಿದಂತೆ ರೈತರಿಗೆ ಮತ್ತು ಸರ್ಕಾರದ ಕೊಂಡಿಯಾಗಿ ಕಾರ್ಯ ನಿರ್ವಹಿಸಲಿದ್ದೇನೆ ಎಂದು ಭರವಸೆ ನೀಡಿದರು.


ಮರಳಿಗ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ನಿಂಗೇಗೌಡ, ನಿರ್ದೇಶಕರಾದ ಎಂ.ಸಿ.ಪುಟ್ಟಸ್ವಾಮಿ, ಪುಟ್ಟಸ್ವಾಮಿ, ಎಂ.ಎಂ.ನಾಗರಾಜು, ಎಂ.ಪಿ.ಮಧು, ಎಂ.ಸಿ.ಚನ್ನಪ್ಪ, ಮರಿಯಪ್ಪ, ಸುನೀತಾ, ಸರೋಜಮ್ಮ, ಕಮಲಮ್ಮ, ಮಂಗಳಾ, ಮುಖಂಡರಾದ ಸ್ವಾಮಿ, ಯೋಗಾನಂದ, ಎಂ.ಬಿ.ವೆಂಕಟೇಶ, ವಾಸು, ನಂಜೇಗೌಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net