ಜಿಲ್ಲೆಯಲ್ಲಿ ನಾಲ್ಕು ಕಡೆ ಬೃಹತ್ ಆರೋಗ್ಯ ಶಿಬಿರ

IMG-20240209-WA0002.jpg
Published on


-ಸುದ್ದಿಗೋಷ್ಠಿಯಲ್ಲಿ  ಕವಟಗಿಮಠ ಹೇಳಿಕೆ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಬಡವರಿಗೆ, ಗ್ರಾಮೀಣ ಭಾಗವದರಿಗೆ ಗುಣಮಟ್ಟದ ಆರೋಗ್ಯ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ  ಫೆ.10 ರಿಂದ 27ರ ವರೆಗೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಾಲ್ಕು ಕಡೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಂತೇಶ ಕವಟಗಿಮಠ ಫೌಂಡೇಶನ್, ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾಲಯ ಕೇಂದ್ರ ಹಾಗೂ ಜವಾಹರಲಾಲ್ ವೈದ್ಯಕೀಯ ಮಹಾ ವಿದ್ಯಾಲಯದ ಸಹಯೋಗದಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಯಲ್ಲಿ ಒಂದಾದ ಆಯುಷ್ಮಾನ್ ಯೋಜನೆಯ ಲಾಭವನ್ನು ಬಡ ಜನರು ಪಡೆದುಕೊಳ್ಳಬೇಕು. ಗ್ರಾಮೀಣ ಭಾಗದ ಕಟ್ಟ ಕಡೆಯ ವ್ಯಕ್ತಿಗೂ ಗುಣಮಟ್ಟದ ಆರೋಗ್ಯ ಸಿಗುವ ನಿಟ್ಟಿನಲ್ಲಿ ಮಹಾಂತೇಶ ಕವಟಗಿಮಠ ಫೌಂಡೇಶನ್ ಕೆಲಸ ಮಾಡಲಿದೆ ಎಂದರು.
ಯಶಸ್ವಿನಿ ಯೋಜನೆ ಉತ್ತರ ಕರ್ನಾಟಕದ ಮಹತ್ವದ ಯೋಜನೆ ಆದರೆ ಖಾಸಗಿ ಆಸ್ಪತ್ರೆಯಲ್ಲಿ ಇದು ಅನ್ವಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸರಕಾರ ಯಶ್ವಿನಿ ಯೋಜನೆಯ ದರವನ್ನು ಪರಿಷ್ಕರಣೆ ಮಾಡಬೇಕು ಎಂದು ಸಿಎಂ ಹಾಗೂ ಸಹಕಾರ ಸಚಿವರಿಗೆ ಮನವಿ ಮಾಡಲಿದ್ದೇನೆ ಎಂದರು.
ಫೆ.10 ರಂದು ಬೆಳಗ್ಗೆ 9 ರಿಂದ 10ರವರೆಗೆ ಬೆಳಗುಂದಿಯ ಬಾಲವೀರ ವಿದ್ಯಾನಿಕೇತನ ಮರಾಠಿ ಶಾಲೆಯಲ್ಲಿ, ಫೆ.16 ರಂದು ಬೆಳಗ್ಗೆ 9 ರಿಂದ 1ರವೆಗೆ ರಾಮದುರ್ಗದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಬಾಗಲಕೋಟೆಯ ಸ್ಟೇಟ್ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ, ಫೆ.23 ರಂದು ಬೆಳಗ್ಗೆ 9 ರಿಂದ 1ರವರೆಗೆ ಗೋಕಾಕನ ಕೆಎಲ್ಇ ಶಾಲೆಯ ಆವರಣದಲ್ಲಿ ಹಾಗೂ ಫೆ.27 ರಂದು ಬೆಳಗ್ಗೆ 9 ರಿಂದ 1ರ ವರೆಗೆ ಬೈಲಹೊಂಗಲ ಪ್ರೇರಣಾ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ ಎಂದರು.
ಹೃದಯ ರೋಗ, ದೃದಯ ಶಸ್ತ್ರ ಚಿಕಿತ್ಸೆ, ಅಂಗಾಗ ಕಸಿ ಜೋಡಣೆ, ಅಂಗಾಗ ಕಸಿ, ಶ್ವಾಸಕೋಶ, ಕ್ಯಾನ್ಸರ್ ರೋಗ‌ದ ತಪಾಸಣೆ ನಡೆಸಲಾಗುವುದು. ಇದರ ಲಾಭವನ್ನು ಜನರು ಪಡೆದುಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net