ಬೌದ್ಧಿಕ ಶಕ್ತಿ ವೃದ್ಧಿಗೆ ಪುಸ್ತಕ ಓದು ಸಹಾಯಕ

MK Biradara, National Library Week, Books, Indie, Money, Social Media, Behavior,
ಇಂಡಿ ಪಟ್ಟಣದ ಜಿ.ಆರ್.ಗಾಂಧಿ ಕಲಾ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು, ಸಂಸ್ಥೆ ಸಿಬ್ಬಂದಿ. ಎಂ.ಕೆ.ಬಿರಾದಾರ, ಡಾ.ಎಸ್.ಬಿ.ಜಾಧವ, ವೈಷ್ಣವಿ ರಾಠೋಡ, ರಾಘವೇಂದ್ರ ಇಂಗನಾಳ, ಡಾ.ಸುರೇಂದ್ರ ಕೆ ಇತರರಿದ್ದರು.
Published on

ಇಂಡಿ: ಗ್ರಂಥಾಯಲಗಳು ದೇವಾಲಯಗಳಿದ್ದಂತೆ. ಹಣವಿದ್ದರೆ ಕಳೆದು ಹೋಗಬಹುದು. ಆದರೆ ಪುಸ್ತಕಗಳಿಂದ ಪಡೆದ ಜ್ಞಾನ ಕಳೆದು ಹೋಗಲು ಸಾಧ್ಯವೇ ಇಲ್ಲ. ಗ್ರಂಥಗಳನ್ನು ಅಧ್ಯಯನ ಮಾಡುವವರು ಮಹೋನ್ನತ ನಾಯಕರಾಗಿ ಬೆಳದ ಉದಾಹರಣೆಗಳು ಸಾಕಷ್ಟಿವೆ ಎಂದು ಚಡಚಣದ ಸಂಗಮೇಶ್ವರ ಕಲಾ- ವಾಣಿಜ್ಯ ಮಹಾವಿದ್ಯಾಲಯ ಗ್ರಂಥಪಾಲಕ ಎಂ.ಕೆ.ಬಿರಾದಾರ ಹೇಳಿದರು.

ಪಟ್ಟಣದ ಜಿ.ಆರ್.ಗಾಂಧಿ ಕಲಾ, ವೈ.ಎ.ಪಾಟೀಲ ವಾಣಿಜ್ಯ ಹಾಗೂ ಎಂ.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದ ಗ್ರಂಥಾಲಯದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುಸ್ತಕ ಓದುವಿಕೆ ನಿರಂತರವಾಗಿದ್ದರೆ ವ್ಯಕ್ತಿ ಬೌದ್ಧಿಕವಾಗಿ ಜೀವಂತವಾಗಿರುತ್ತಾನೆ. ಯುವಪೀಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಲಹರಣ ಮಾಡುತ್ತ ಓದುವಿಕೆಯಿಂದ ದೂರ ಉಳಿಯುತ್ತಿರುವುದು ಕಳವಳಕಾರಿ ಎಂದರು.

ಪ್ರಾಂಶುಪಾಲ ಡಾ.ಎಸ್.ಬಿ.ಜಾಧವ ಮಾತನಾಡಿ, ಮನುಕುಲದ ಉದ್ಧಾರಕ್ಕೆ ಪುಸ್ತಕಗಳ ಕೊಡುಗೆ ಅಪಾರವಾಗಿದೆ. ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜತೆಗೆ ಸಾಹಿತ್ಯ ಸಂಸ್ಕೃತಿ ಹಿನ್ನೆಲೆಯ ಕೃತಿಗಳನ್ನು ಓದಬೇಕು ಎಂದರು.

ಗ್ರಂಥಾಲಯದ ವತಿಯಿಂದ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು. ವೈಷ್ಣವಿ ರಾಠೋಡ, ರಾಘವೇಂದ್ರ ಇಂಗನಾಳ, ಡಾ.ಸುರೇಂದ್ರ ಕೆ ಮಾತನಾಡಿದರು.

ಪ್ರಾಧ್ಯಾಪಕ ಡಾ.ಆನಂದ ನಡುವಿನಮನಿ, ಡಾ.ವಿಶ್ವಾಸ ಕೊರವಾರ, ಶ್ರೀಶೈಲ ಸಣ್ಣಕ್ಕಿ, ಡಾ.ಸಿ.ಎಸ್.ಬಿರಾದಾರ, ಡಾ.ಜಯಪ್ರಸಾದ ಡಿ., ಡಾ.ಕಾಂತ ರಾಠೋಡ, ಮಲ್ಲಿಕಾರ್ಜುನ ಕೋಣದೆ, ಶ್ರುತಿ ಪಾಟೀಲ, ಶ್ವೇತಾ ಕಾಂತ, ಪಂಕಜಾ ಕುಲಕರ್ಣಿ, ಶ್ರುತಿ ಬಿರಾದಾರ, ಪರಶುರಾಮ ಅಜಮನಿ, ನಸ್ರೀನ ವಾಲಿಕಾರ, ದಾನಮ್ಮ ಪಾಟೀಲ, ಪ್ರಶಾಂತ ಹಿರೇಮಠ, ಆನಂದ ತಾಂಬೆ, ಮಹಾದೇವ ಹಳ್ಳದಮನಿ, ಪ್ರೀತಿ ಘಾಳಿಮಠ, ಜನಾಬಾಯಿ ಪಾರೆಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net