ಮಿಯ್ಯಾರು ನಾಗಮಂಡಲ ಚಪ್ಪರಮುಹೂರ್ತ

chappara muhurtha
Published on

ಕೊಕ್ಕರ್ಣೆ: ನಾಲ್ಕೂರು ಗ್ರಾಮದ ಮಿಯ್ಯಾರು ದೊಡ್ಡಮನೆ ಕುಟುಂಬಸ್ಥರಿಂದ ಫೆ.22ರಂದು ನಡೆಯಲಿರುವ ಚತುಃಪವಿತ್ರ ನಾಗಮಂಡಲೋತ್ಸವದ ಪ್ರಯುಕ್ತ ಪೂರ್ವಭಾವಿ ಕಾರ್ಯಕ್ರಮವಾಗಿ ಚಪ್ಪರಮುಹೂರ್ತ ಸೋಮವಾರ ಜರುಗಿತು.

ಧಾರ್ಮಿಕ ಕಾರ್ಯಕ್ರಮಗಳಾದ ಸಾಮೂಹಿಕ ಪ್ರಾರ್ಥನೆ, ಗಣಯಾಗ, ನಾಗದೇವರಿಗೆ ಪವಮಾನ ಕಲಶಾಭಿಷೇಕ, ಮಹಾಮಂಗಳಾರತಿ ಮುಂತಾದ ಸೇವೆಗಳು ಅರ್ಚಕ ರಾಘವೇಂದ್ರ ಭಟ್, ಸ್ಥಳದ ಅರ್ಚಕ ಹರಿಕೃಷ್ಣ ಉಡುಪ ಮಿಯ್ಯಾರು ನೆರವೇರಿಸಿದರು.

ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವವನ್ನು ಚೇರ್ಕಾಡಿ ನಾಗಯಕ್ಷಿ ಪಾತ್ರಿ ಸುದರ್ಶನ್ ಸೂರ್ಯ ನೆರವೇರಿಸಿದರು.

ದೊಡ್ಡಮನೆ ಕುಟುಂಬಸ್ಥರ ಹಿರಿಯರಾದ ಪಾರ್ವತಿ ಶೆಡ್ತಿ, ಕಮಲ ಶೆಡ್ತಿ, ಚಂದ್ರಶೇಖರ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮಿ ವಾದಿರಾಜ ಶೆಟ್ಟಿ ಚಾರಾ ಹೆಬ್ರಿ, ಭಾಸ್ಕರ ಶೆಟ್ಟಿ, ಸದಾನಂದ ಶೆಟ್ಟಿ, ರಘುರಾಮ ಶೆಟ್ಟಿ, ಜಿಪಂ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಸುಧಾಕರ ಶೆಟ್ಟಿ ಮಿಯ್ಯಾರು, ಹರಿಪ್ರಿಯ ಹುಬ್ಬಳ್ಳಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಎನ್.ಕರುಣಾಕರ ಶೆಟ್ಟಿ ಕಜ್ಕೆ, ಕೆ.ಸುಧಾಕರ ಶೆಟ್ಟಿ ಹರಿಪ್ರಿಯ ಹುಬ್ಬಳ್ಳಿ, ಕರವೇ ಸಂಚಾಲಕ ಸಿ.ಎಂ.ಪ್ರಸನ್ನ ಕುಮಾರ್ ಶೆಟ್ಟಿ, ಮಹೇಶ್ ಶೆಟ್ಟಿ, ಕರುಣಾಕರ ಶೆಟ್ಟಿ ಕೆಂಜೂರು, ರಾಮಕೃಷ್ಣ ಶೆಟ್ಟಿ ಮತ್ತು ದೊಡ್ಡಮನೆ ಕುಟುಂಬಸ್ಥರು, ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net