ಬಳ್ಳಾರಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Published on

ಬಳ್ಳಾರಿ : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ‌ನಡೆಯುತ್ತಿರುವ ದೌರ್ಜನ್ಯ ನಿಲ್ಲಬೇಕು ಮತ್ತು ಹಿಂದೂಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ದೇಶ ಭಕ್ತ‌ ನಾಗರಿಕರ‌ ವೇದಿಕೆಯಿಂದ ಕರೆ‌ ನೀಡಿದ್ದ ಸ್ವಯಂ ಪ್ರೇರಿತ ಬಳ್ಳಾರಿ ಬಂದ್ ಗೆ ಬುಧವಾರ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ದೊರೆಯಿತು.

ಇಲ್ಲಿನ ಗಡಗಿ ಚೆನ್ನಪ್ಪ ವೃತ್ತದ ವೇದಿಕೆಯಿಂದ ಬೈಕ್ ರ್ಯಾಲಿ ನಡೆಸಿದ ಕಾರ್ಯಕರ್ತರು, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ, ಬಂದ್ ಬೆಂಬಲಿಸುವಂತೆ ಕೋರಿದರು. ಬಳಿಕ ವೇದಿಕೆ ಮುಂಭಾಗದಲ್ಲಿ ಮಾನವ ಸರಪಳಿ ನಿರ್ಮಿಸಿ, ಬಾಂಗ್ಲಾದೇಶದ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಕಾಲ ವಾಹನ ಸವಾರರಿಗೆ ಟ್ರಾಫಿಕ್ ‌ಸಮಸ್ಯೆ ಉಂಟಾಯಿತು. ಬಂದ್ ಗೆ ಪೂರ್ವ ನಿಯೋಜಿತವಾಗಿ ಆಟೋ ಪ್ರಚಾರ ಮಾಡಿದ್ದರಿಂದ ಕೆಲ ವ್ಯಾಪಾರಿಗಳು ತಮ್ಮ ಮಳಿಗೆಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿಕೊಳ್ಳುವ ಮೂಲಕ ಬಂದ್ ಗೆ ಬೆಂಬಲ ನೀಡಿದರು. ಇನ್ನೂ ಗಡಿಗಿ ಚನ್ನಪ್ಪ ವೃತ್ತದಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಗಳು ನಗರದ ಹಳೆ ಬಸ್ ನಿಲ್ದಾಣಕ್ಕೆ ಆಗಮಿಸದೆ ಹೊಸ ಬಸ್ ನಿಲ್ದಾಣದಿಂದಲೇ ಸಂಚಾರ ಆರಂಭಿಸಿದವು. ನಿಲ್ದಾಣಕ್ಕೆ ಆಗಮಿಸುತ್ತಿದ್ದ ಪ್ರಯಾಣಿಕರನ್ನು ಅಲ್ಲಿನ ಸಿಬ್ಬಂದಿ ಹೊಸ ಬಸ್ ನಿಲ್ದಾಣಕ್ಕೆ ಕಳುಹಿಸುತ್ತಿದ್ದರು. ಕೆಲವೊಂದು ಶಾಲೆಗಳು ರಜೆ ಘೋಷಿಸುವ ಮೂಲಕ ಬಂದ್ ಗೆ ಬೆಂಬಲಿಸಿದ್ದು, ಸರ್ಕಾರಿ ಶಾಲಾ, ಕಾಲೇಜುಗಳು, ಸರ್ಕಾರಿ ಕಚೇರಿಗಳು, ಪ್ರಯಾಣಿಕರ ಆಟೋಗಳು, ಜನದಟ್ಟಣೆ, ವಾಹನಗಳ ದಟ್ಟಣೆ ಎಂದಿನಂತೆ ಚಾಲನೆಯಲ್ಲಿದ್ದವು. ಅಲ್ಲದೆ, ಇನ್ನೂ ಕೆಲವು ಕಡೆ ತೆರೆಯಲಾಗಿದ್ದ ಅಂಗಡಿ ಮುಂಗಟ್ಟುಗಳನ್ನು ಪ್ರತಿಭಟನಾಕಾರರು ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸಿದ ಘಟನೆಗಳು ಕಂಡಬಂದವು. ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್, ಆರ್ ಎಸ್ ಎಸ್, ಬಿಜೆಪಿ ಸದಸ್ಯರು , ದೇಶ ಭಕ್ತ‌ ನಾಗರಿಕರು ಸೇರಿ ಎಸ್.ಎನ್. ಪೇಟೆ, ಎಸ್ಪಿ, ಮೋತಿ, ಸುಧಾ ಕ್ರಾಸ್ ಸೇರಿದಂತೆ ನಗರದ ವಿವಿಧಡೆ ಬೈಕ್ ರ್ಯಲಿ‌ ನಡೆಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಮಾತನಾಡಿ, ನಾವೆಲ್ಲರೂ ಅಹಿಂಸೆಯ ತತ್ವ ಪಾಲಿಸುವುದಕ್ಮೆ ಮಹಾತ್ಮ‌ಗಾಂಧಿಗಳ ಅಲ್ಲ, ಮತ್ತೋಮ್ಮೆ ನಾಥರಾಮ್ ಘೋಡ್ಸೆ ಬಂದರೆ ಮಾತ್ರ ಹಿಂದೂಗಳ ರಕ್ಷಣೆ ಸಾಧ್ಯವಾಗಲಿದೆ. ದೇಶದ್ಯಾಂತ ಒಗ್ಗೂಟ್ಟನಿಂದ ಹೋರಾಡಿ ಹಿಂದೂ ಧರ್ಮ ರಕ್ಷಿಸಬೇಕು. ಹಿಂದೂಗಳ ಮೇಲೆ ಹಲ್ಲೆ ನಡೆದರೆ ಸುಮ್ಮನೆ ‌ಕೂರಲು ನಾವೇನು‌ ಕೈಗೆ ಬಳೆ ಹಾಕಿಕೊಂಡಿಲ್ಲ. ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹಿಂದೂಗಳು ಮೂವರು ಮಕ್ಕಳಿಗೆ ಜನ್ಮ ನೀಡಬೇಕು ಎಂದಿದ್ದಾರೆ. ಆದರೆ, ನನ್ನ ಪ್ರಕಾರ ಪ್ರತಿ ಮನೆಯಲ್ಲಿ ‌ಆರ್ ಎಸ್ಎಸ್ ಸದಸ್ಯ ಇರಬೇಕು ಎಂದರೆ ಆರು ಮಕ್ಕಳಿಗೆ ಜನ್ಮ ನೀಡಬೇಕು ಎಂದರು. ಕುಲ ಕುಲ ಅಂತಹ ಹೋದರೆ ಮುಂದಿನ ದಿನಗಳಲ್ಲಿ ಬಾಂಗ್ಲಾ ಪರಿಸ್ಥಿತಿ ಭಾರತಕ್ಕೂ ಬರಲಿದೆ. ರಾಜ್ಯದಲ್ಲಿ ವಕ್ಫ್ ಬೋರ್ಡ್ ನಿಂದ ರೈತರಿಗೆ ‌ನೋಟಿಸ್‌ ನೀಡಲಾಗುತ್ತಿದೆ ಎಂದು ಕಿಡಿಕಾರಿದರು. ಪಾಕಿಸ್ತಾನ ಖೋಟಾ ನೋಟು ಮುದ್ರಿಸಿ ಭಯೋತ್ಪಾದನೆ‌ ಮುಂದಾಗುತ್ತಿತ್ತು. ಪ್ರಧಾನಿ‌ ಮೋದಿ ಅವರು ದೇಶದಲ್ಲಿ ನೋಟ್ ಬ್ಯಾನ್ ಮಾಡುತ್ತಿದ್ದಂತೆ ಪಾಕಿಸ್ತಾನದಲ್ಲಿನ ವಸ್ತುಗಳ ಬೆಲೆ ಗಗನಕ್ಕೆ ಏರಿ ಪಾಕಿಸ್ತಾನ ಆರ್ಥಿಕ ದಿವಾಳಿಯಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆದರೆ ರಕ್ತ ಕುದಿಯುತ್ತೆ. ಅದರಂತೆ, ಇಂತಹ ಘಟನೆಗಳು ನಡೆದಾಗ ಮೂರು ಲಕ್ಷಕ್ಕೂ ಅಧಿಕ ಜನ ಸೇರಿದರೆ ಮಾತ್ರ ಬಂದ್ ಯಶ್ವಸಿಯಾಗಲು ಸಾಧ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net