

ಮಡಿಕೇರಿ:
ನಿರ್ಮಲಾ ಸೀತಾರಾಮ್ ಮಂಗಳವಾರ ಮಂಡಿಸಿದ ಕೇಂದ್ರ ಬಜೆಟ್‌ಗೆ ಜಿಲ್ಲೆಯಲ್ಲಿ ಬಹುತೇಕ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶದ ಅಭಿವೃದ್ದಿಯ ಮುಂದಾಲೋಚನೆಯಿAದ ಮಂಡಿಸಿದ ಬಜೆಟ್ ಇದು ಎಂದು ಬಹುತೇಕರು ಬಣ್ಣಿಸಿದ್ದಾರೆ. ಬಜೆಟ್ ರೂಪಿಸುವ ಸಂದರ್ಭ ಕೃಷಿ, ಯುವಜನತೆ ಸೇರಿದಂತೆ ಎಲ್ಲಾ ವಲಯಗಳನ್ನು ಗಮನದಲ್ಲಿ ಇರಿಸಿಕೊಳ್ಳಲಾಗಿದೆ. ನಿರುದ್ಯೋಗ ನಿವಾರಣೆ ಕಡೆಗೆ ಹೆಚ್ಚಿನ ಗಮನ ಕೇಂದ್ರೀಕರಿಸಲಾಗಿದೆ ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿದೆ.
ಆದರೆ ವಿರೋಧ ಪಕ್ಷ ಕಾಂಗ್ರೆಸ್‌ನಿAದ ಈ ಬಜೆಟ್ ಬಗ್ಗೆ ಟೀಕೆ ಕೇಳಿಬಂದಿದೆ. ಇದೊಂದು ಋಣ ಸಂದಾಯದ ಬಜೆಟ್ ಎಂದು ಆಕ್ರೋಶ ವ್ಯಕ್ತವಾಗಿದೆ, ಬಿಹಾರ ಮತ್ತು ಆಂಧ್ರಪ್ರದೇಶದ ಜೆಡಿಯು ಹಾಗೂ ಟಿಡಿಪಿ ಎನ್.ಡಿ.ಎ ಸರ್ಕಾರಕ್ಕೆ ನೀಡಿದ ಬೆಂಬಲಕ್ಕೆ ಪ್ರತಿಯಾಗಿ ಋಣ ತೀರಿಸಲು 140 ಕೋಟಿ ಜನತೆಯ ತೆರಿಗೆ ಹಣವನ್ನು ಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಒಟ್ಟಾರೆಯಾಗಿ ಬಜೆಟ್ ಬಗ್ಗೆ ವಿಜಯವಾಣಿ ಓದುಗರು ಇಂದಿನ ಲೌಡ್‌ಸ್ಪೀಕರ್‌ನಲ್ಲಿ ಹಂಚಿಕೊAಡ ಅಭಿಪ್ರಾಯಗಳು ಇಲ್ಲಿದೆ.
ಇದು ದೇಶದ ಬಜೆಟ್ ಅಲ್ಲ. ಎರಡು ರಾಜ್ಯಗಳನ್ನು ಕೇಂದ್ರೀಕರಿಸಿದ ಋಣ ಸಂದಾಯದ ಬಜೆಟ್. ಬಿಹಾರ ಮತ್ತು ಆಂಧ್ರಪ್ರದೇಶದ ಜೆಡಿಯು ಹಾಗೂ ಟಿಡಿಪಿ ಎನ್.ಡಿ.ಎ ಸರ್ಕಾರಕ್ಕೆ ನೀಡಿದ ಬೆಂಬಲಕ್ಕೆ ಪ್ರತಿಯಾಗಿ ಋಣ ತೀರಿಸಲು 140 ಕೋಟಿ ಜನತೆಯ ತೆರಿಗೆ ಹಣವನ್ನು ಬಳಕೆ ಮಾಡಿದ್ದಾರೆ. ಕರ್ನಾಟಕ ಸರ್ಕಾರವನ್ನು ಮೋದಿ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ. ಒಕ್ಕೂಟದ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಜ್ಯವನ್ನು ಸಮಾನವಾಗಿ ಕಾಣುವುದು ಕೇಂದ್ರ ಸರ್ಕಾರದ ಹೊಣೆಗಾರಿಕೆಯಾಗಿದೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದ ಕೇಂದ್ರ ಸರ್ಕಾರ ಕಡೆಗಣಿಸಿರುವುದು ಸ್ಪಷ್ಟವಾಗಿದೆ.
ತೀತಿರ ಧರ್ಮಜಾ ಉತ್ತಪ್ಪ, ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಸಮಿತಿ, ಕೊಡಗು
ಮಹಿಳೆಯರು, ಯುವಕರು, ಬಡವರು ಹಾಗೂ ರೈತ ಪರ ಬಜೆಟ್ ಇದಾಗಿದೆ. ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿಗೆ ಉತ್ತೇಜನ ನೀಡಲಾಗಿದೆ. ಬುಡಕಟ್ಟು ಜನಾಂಗಕ್ಕೆ ಹೆಚ್ಚಿನ ಸೌಕರ್ಯ ಕಲ್ಪಿಸಲಾಗಿದೆ. ಇ. ವಾಣಿಜ್ಯ ಮತ್ತು ರಪ್ತು ಮಾರಾಟಗಳನ್ನು ಪ್ರೋತ್ಸಾಹಿಸಲಾಗಿದೆ. ಗುಡಿಕೈಗಾರಿಕೆ, ಬೀದಿ ಬದಿ ವ್ಯಾಪಾರಕ್ಕೆ ಹೆಚ್ಚಿನ ಆದ್ಯತೆ ಕಾಣುತ್ತಿದೆ. ತೆರಿಗೆ ಸರಳೀಕರಣಗೊಳಿಸಲಾಗಿದೆ. ಒಟ್ಟಿನಲ್ಲಿ ಜನಪರ ಮತ್ತು ಆರ್ಥಿಕ ಅಭಿವೃದ್ಧಿಯ ಚಿಂತನಾಪರ ಬಜೆಟ್ ಇದಾಗಿದೆ.
ಗೀತಾ ಗಿರೀಶ್, ಆರ್ಥಿಕ ಮತ್ತು ವಿಮಾ ಸಲಹೆಗಾರರು, ಮಡಿಕೇರಿ
ಕೇಂದ್ರ ಸರ್ಕಾರದ ಬಜೆಟ್ ಗ್ರಾಮೀಣ ಜನತೆಗೆ ಒತ್ತು ನೀಡಿದೆ. ಕೃಷಿ, ಯುವಜನತೆ, ಮಹಿಳೆಯರಿಗೆ, ದಲಿತರಿಗೆ, ಬಡವರಿಗೆ ಸಹಕಾರಿಯಾಗಿದೆ. ಕೌಶಲ್ಯಾಭಿವೃದ್ಧಿ, ಶಿಕ್ಷಣ, ಉದ್ಯೋಗ, ಕೃಷಿಯಿಂದ ಗ್ರಾಮಭಿವೃದ್ಧಿಗೆ ಪೂರಕವಾಗಿದೆ. ಗ್ರಾಮ ಮಟ್ಟದಿಂದ ಕಾರ್ಯಗತವಾದರೆ ದೇಶದ ಅಭಿವೃದ್ಧಿಗೆ ಒತ್ತು ನೀಡುವ ಬಜೆಟ್ ಇದಾಗಿದೆ.
ಮೂವೇರ ರೇಖಾ ಪ್ರಕಾಶ್, ನಾಪೋಕ್ಲು ನಿವಾಸಿ
4.1 ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವ ಯೋಜನೆಯಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ ಆಗುವ ನಿರೀಕ್ಷೆ ಇದೆ. 3 ಲಕ್ಷ ರೂಪಾಯಿಗೆ ಯಾವುದೇ ತೆರಿಗೆ ವಿಧಿಸದೆ ಇರುವುದರಿಂದ ತೆರಿಗೆ ಪಾವತಿಸಲು ಇನ್ನು ಹೆಚ್ಚು ಜನರು ಮುಂದಾಗುತ್ತಾರೆ. ಮುದ್ರಾ ಯೋಜನೆಯಲ್ಲಿ 10 ಲಕ್ಷ ರೂ.ಕೊಡುತ್ತಿದ್ದ ಸಾಲವನ್ನು 20 ಲಕ್ಷ ರೂ.ಗೆ ಏರಿಸಿರುವುದು ಒಳ್ಳೆಯ ಕ್ರಮ. ಚಿನ್ನ, ಬೆಳ್ಳಿ ಇತರೆ ವಸ್ತುಗಳ ತೆರಿಗೆ ವಿನಾಯಿತಿ ದೊರೆತಿದೆ. ರೈತರಿಗೆ ಹಲವು ಯೋಜನೆಗಳು ಘೋಷಣೆಯಾಗಿದೆ. ಎಲ್ಲ ಕ್ಷೇತ್ರಕ್ಕೂ ಅದ್ಯತೆ ನೀಡಲಾಗಿದೆ. ಈ ಬಜೆಟ್ ದೂರದೃಷ್ಟಿಯ ಬಜೆಟ್.
ಎಸ್.ಕೆ. ಸತೀಶ್, ಉದ್ಯಮಿ, ಕುಶಾಲನಗರ
ಈ ಬಾರಿ ಶಿಕ್ಷಣ, ಉದ್ಯೋಗ, ಕೃಷಿ ಸೇರಿದಂತೆ ಹತ್ತು ಯೋಜನೆಗಳನ್ನು ಗಮನದಲ್ಲಿರಿಸಿಕೊಂಡು ಬಜೆಟ್ ಮಂಡಿಸಲಾಗಿದೆ. ಇದೊಂದು ಆಶಾದಾಯಕ ಬಜೆಟ್ ಆಗಿದೆ. ದೂರದೃಷ್ಟಿ ಇಟ್ಟುಕೊಂಡು ಬಜೆಟ್ ರೂಪಿಸಲಾಗಿದೆ ಎಂದು ಬಣ್ಣಿಸಬಹುದು.
ಪಿ.ಆರ್. ಸುನಿಲ್ ಕುಮಾರ್, ಅಧ್ಯಕ್ಷ, ಗ್ರಾ.ಪಂ. ಸುಂಟಿಕೊಪ್ಪ
ಶಿಕ್ಷಣ ಕೇತ್ರಕ್ಕೆ ಹಲವು ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿರುವುದು ಆಶಾದಾಯಕವಾಗಿದೆ. ಯುವಕರಿಗೆ ಉದ್ಯೋಗ ಸೃಷ್ಟಿಗಾಗಿ ಯೋಜನೆಗಳನ್ನು ರೂಪಿಸಲಾಗಿದೆ. ಬಡವರು ಮತ್ತು ಸಾಮಾನ್ಯ ವರ್ಗದವರ ಹಿತ ಕಾಯುವಿಕೆಯ ಬಜೆಟ್ ಇದಾಗಿದೆ.
ಎಂ.ಬಿ. ಅಭಿಮನ್ಯು ಕುಮಾರ್, ಹಿರಿಯ ವಕೀಲ, ಸೋಮವಾರಪೇಟೆ
ನಿರ್ಮಲಾ ಸೀತಾರಾಮ್ ಮಂಡಿಸಿದ ಬಜೆಟ್ ದೂರದೃಷ್ಟಿಯ ಬಜೆಟ್ ಆಗಿದೆ. ಯುವಕರಿಗೆ, ಮಧ್ಯಮ ವರ್ಗಕ್ಕೆ ಪೂರಕವಾಗಿದ್ದು, ಯುವಕರಿಗೆ ಇಂಟರ್ನ್ಶಿಪ್,
ಉನ್ನತ ಶಿಕ್ಷಣಕ್ಕಾಗಿ ಹತ್ತು ಲಕ್ಷದ ವರೆಗಿನ ಸಾಲಕ್ಕಾಗಿ ಇ -ವೋಚರ್ ಸೌಲಭ್ಯ, ವಿದ್ಯಾರ್ಥಿಗಳಿಗೆ ಶೇ.3ರ ಬಡ್ಡಿಯಲ್ಲಿ ಶಿಕ್ಷಣ ಸಾಲ, ಪ್ಲಾಸ್ಟಿಕ್ ನಿಯಂತ್ರಣಕ್ಕೆ ಕ್ರಮ, ಕ್ಯಾನ್ಸರ್ ಔಷಧಗಳಿಗೆ ಸೀಮಾ ಸುಂಕ ಇಳಿಕೆ, ಚಿನ್ನ ಬೆಳ್ಳಿ ಪ್ಲಾಟಿನಮ್ ಮೇಲೆ ಶೇ. 6.4 ಕಷ್ಟಮ್ಸ್ ಸುಂಕ ಇಳಿಕೆ.. ಹೀಗೆ ಉತ್ತಮ ಅಂಶಗಳು ಬಜೆಟ್‌ನಲ್ಲಿದೆ.
ರೂಪಾ ಸತೀಶ್, ಗೃಹಿಣಿ, ಮಸಗೋಡು ಗ್ರಾಮ, ಸೋಮವಾರಪೇಟೆ.
ಚಿನ್ನ-ಬೆಳ್ಳಿ ಮೇಲಿನ ದರವನ್ನು ಇಳಿಕೆ ಮಾಡಲಾಗಿದೆ. ಹೊಸ ತೆರಿಗೆ ಪದ್ಧತಿಯಲ್ಲಿ ಸ್ಟಾö್ಯಂಡರ್ಡ್ ಡಿಡಕ್ಷನ್ 50 ಸಾವಿರದಿಂದ 75 ಸಾವಿರ ರೂ.ಗೆ ಹೆಚ್ಚಿಸಿರುವುದು ಉತ್ತಮ ಬೆಳವಣಿಗೆ. ಕೃಷಿ ಕ್ಷೇತ್ರಕ್ಕೆ 1.5 ಲಕ್ಷ ಕೋಟಿ ರೂ.ಘೋಷಣೆ, ನೈಸರ್ಗಿಕ ಕೃಷಿ ವ್ಯಾಪ್ತಿಗೆ 1 ಕೋಟಿ ರೈತರು, ಶಿಕ್ಷಣ, ಕೌಶಲ್ಯ, ಉದ್ಯೋಗ ಅಭಿವೃದ್ಧಿಗಾಗಿ 1.48 ಲಕ್ಷ ಕೋಟಿ ಮೀಸಲು, ಮೊದಲ ಬಾರಿ ಉದ್ಯೋಗ ಮಾಡುವವರಿಗೆ ಒಂದು ತಿಂಗಳು ಸರ್ಕಾರದಿಂದಲೇ ಸಂಬಳ, 5 ವರ್ಷಗಳಲ್ಲಿ 4.1 ಕೋಟಿ ಯುವಜನತೆಗೆ ಉದ್ಯೋಗ ಯೋಜನೆ.. ಹೀಗೆ ಇದೊಂದು ಅತ್ಯತ್ತಮ ಬಜೆಟ್.
ರಘು ಎಸ್. ಎನ್., ಗ್ರಾಮ ಪಂಚಾಯತಿ ಸದಸ್ಯ, ಶನಿವಾರಸಂತೆ.
ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣ, ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರೂ., ಪಿಎಂ ಆವಾಸ್ ಯೋಜನೆಯಡಿ 3 ಕೋಟಿ ಮನೆಗಳ ನಿರ್ಮಾಣ, ಕೌಶಲಾಭಿವೃದ್ಧಿ ಹಾಗೂ ಉದ್ಯೋಗಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಲಿದ್ದು, ಮೊದಲ ಬಾರಿ ಉದ್ಯೋಗ ಮಾಡುವವರಿಗೆ ಸರ್ಕಾರದಿಂದ ಸಹಾಯ ದೊರೆಯಲಿದೆ. ಔಪಚಾರಿಕ ವಲಯದಲ್ಲಿ ಮೊದಲ ಬಾರಿಗೆ ಉದ್ಯೋಗ ಆರಂಭಿಸುವವರಿಗೆ ಒಂದು ತಿಂಗಳ ವೇತನವನ್ನು ಸರ್ಕಾರದಿಂದ ನೀಡಲಾಗುವುದು ಎಂದು ಹೇಳಿದ್ದಾರೆ.
ಮುದ್ರಾ ಸಾಲದ ಮಿತಿಯನ್ನು 10 ಲಕ್ಷದಿಂದ 20 ಲಕ್ಷ ರೂ.ಗೆ ಏರಿಕೆ ಮಾಡಿದ್ದಾರೆ. ಇದು ಸ್ವಾಗತಾರ್ಹ ಬಜೆಟ್
ಮಹಮ್ಮದ್ ಗೌಸ್, ಮಾಜಿ ಅಧ್ಯಕ್ಷ, ಗ್ರಾಮ ಪಂಚಾಯತಿ, ಶನಿವಾರಸಂತೆ
ತೆರಿಗೆ ಸರಳೀಕರಣದ ಪ್ರಯತ್ನ ಆಗಿದೆ. ಹೊಸ ತೆರಿಗೆ ಕ್ರಮ ಆಯ್ಕೆ ಮಾಡುವವರಿಗೆ ತೆರಿಗೆ ದರದಲ್ಲಿ ಸಡಿಲಿಕೆಯಿಂದ ತೆರಿಗೆ ಹೊರೆ ಕಡಿಮೆ ಆಗಲಿದೆ. ಸಂಬಳ ಆದಾಯದವರ ಪ್ರಮಾಣಿತ ಕಡಿತ ಹೆಚ್ಚಿಸಿರುವುದು ತೆರಿಗೆಯನ್ನು ಕಡಿಮೆ ಮಾಡಲಿದೆ. ಮುದ್ರಾ ಯೋಜನೆಯಲ್ಲಿ ತರುಣ ವಿಭಾಗದ ಸಾಲವನ್ನು 10 ಲಕ್ಷ ದಿಂದ 20 ಲಕ್ಷಕ್ಕೆ ಹೆಚ್ಚಿಸಿರುವುದು ಉತ್ತಮ. ತೆರಿಗೆಯ ಹೊಸ ಮೂಲಗಳನ್ನು ಹೆಚ್ಚಿಸುವ ಪ್ರಯತ್ನ ಆಗಿದೆ. ಒಟ್ಟಾರೆ ದೇಶದ ಆದಾಯದ ಮೂಲವನ್ನು ಹೆಚ್ಚಿಸುವ ಎಲ್ಲಾ ಪ್ರಯತ್ನ ಆಗಿದೆ.
ದೇವಿಪ್ರಸಾದ್, ಆಡಿಟರ್, ಕುಶಾಲನಗರ
ನಿರ್ಮಲಾ ಸೀತರಾಮನ್ ಏಳನೇ ಬಾರಿಗೆ ಮಂಡಿಸಿರುವ ಬಜೆಟ್ ಎಲ್ಲಾ ಕ್ಷೇತ್ರಗಳಿಗೂ ಆದ್ಯತೆ ನೀಡಿರುವ ವಿಕಸಿತ ಭಾರತದ ದೃಷ್ಟಿಕೋನದ ಬಜೆಟ್ ಆಗಿದೆ. ರೈತರು, ಮಹಿಳೆಯರು, ಯುವ ಜನತೆ, ನಿರುದ್ಯೋಗಿಗಳು, ಮಧ್ಯಮ ಆದಾಯ (ವೇತನ) ಪಡೆಯುತ್ತಿರುವ ಉದ್ಯೋಗಿಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಆದಾಯ ತೆರಿಗೆ ಲೆಕ್ಕಚಾರ ಮತ್ತು ಸರಳೀಕರಣ ಉತ್ತಮ ಕ್ರಮವಾಗಿದೆ.
ಮೂಟೆರ ಪುಷ್ಪಾವತಿ ರಮೇಶ್, ಜಿಲ್ಲಾಧ್ಯಕ್ಷೆ, ಜೆಡಿಎಸ್ ಮಹಿಳಾ ಘಟಕ