

ಬಿಡದಿ: ರೈತ ದೇಶದ ಬೆನ್ನೆಲುಬು. ಏಕೆಂದರೆ ಭೂಮಿ ಉಳುಮೆ ಮಾಡಿ ಬಿತ್ತಿ ಬೆಳೆ ತಗೆಯುವುದರ ಹಿಂದಿನ ಶ್ರಮ ಅಪಾರ. ಆದರೆ, ಇತ್ತೀಚಿನ ದಿನಗಳಲ್ಲಿ ವ್ಯವಸಾಯದಿಂದ ಆದಾಯ ಬರುತ್ತಿಲ್ಲ ಎಂದು ಕೃಷಿ ಕಾಯಕ ಕೈ ಬಿಡುವವರ ಸಂಖ್ಯೆ ಹೆಚ್ಚಾಗಿದೆ. ಇದರ ನಡುವೆ ಇಲ್ಲೊಬ್ಬ ಪ್ರಗತಿ ಪರ ರೈತರು ವಿಶ್ರ ಬೇಸಾಯ ಮಾಡಿ ಆದಾಯ ಕಾಣುತ್ತ ಸುಖ ಜೀವನ ನಡೆಸುತ್ತಿದ್ದಾರೆ.
ಹೌದು, ತಿಮ್ಮಪ್ಪನಪಾಳ್ಯ ಗ್ರಾಮದ ಪ್ರಗತಿಪರ ರೈತ ರಂಗಸ್ವಾಮಿ, ಜಮೀನಿನಲ್ಲಿ ವಿಶ್ರ ತಳಿಯ ಬೇಸಾಯ ಮಾಡಿಕೊಂಡು ಆದಾಯ ಕಾಣುತ್ತಿದ್ದಾರೆ. 12 ಎಕರೆ ಕೃಷಿ ಭೂಮಿಯಲ್ಲಿ ಮಾವು, ಬಾಳೆ, ತೆಂಗು, ವಿವಿಧ ರೀತಿಯ ತರಕಾರಿ ಬೆಳೆದು ಸಮೃದ್ಧಿ ಜೀವನ ಸಾಗಿಸುತ್ತಿದ್ದಾರೆ.
ಕೈ ಹಿಡಿಯುವ ಮಾವು ಫಸಲು ರೈತ ರಂಗಸ್ವಾಮಿ ಮಾವಿನ ಬೆಳೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಸುಮಾರು 8 ಎಕರೆ ಪ್ರದೇಶದಲ್ಲಿ ಮಾವು ಬೆಳೆದಿದ್ದು, ಸಲು ಕಚ್ಚುವಮಟ್ಟಕ್ಕೆ ತಂದಿದ್ದಾರೆ. ಮಾವು ಹೂವು ಬಿಟ್ಟ ದಿನದಿಂದ ಕೀಳುವವರೆಗೆ ಹೆಚ್ಚಿನ ಜಾಗೃತಿ ವಹಿಸುತ್ತಾರೆ. ಬೇರೆಯವರ ಹಾಗೆ ಇನ್ನೊಬ್ಬರಿಗೆ ಮಾವಿನ ತೋಟವನ್ನು ಗುತ್ತಿಗೆಗೆ ನೀಡದೆ ಸ್ವತ@ ಇವರೇ ಅದರ ನಿರ್ವಹಣೆ ಮಾಡುತ್ತಾರೆ. ಹೂವು ಬಿಟ್ಟಾಗ ಬೇಕಿರುವ ಔಷಧ, ಕಾಯಿ ಬಂದ ಸಂದರ್ಭದಲ್ಲಿ ಔಷಧ ಸಿಂಪಡಣೆ ಮಾಡುತ್ತಾರೆ. ಕಾಯಿ ಹಣ್ಣಿಗೆ ಬರುವಾಗ ಕಿತ್ತು ಇವರೇ ಕೃತಕವಾಗಿ ಹಣ್ಣು ಮಾಡಿ ಮಾರುಕಟ್ಟೆಗೆ ಮಾರಾಟ ಮಾಡುತ್ತಾರೆ. ಈ ವರ್ಷ ಕೂಡ ಅದೇ ರೀತಿ ಮಾಡಿ ಲ ಲ ಆದಾಯ ಕಂಡಿದ್ದಾರೆ. ತೆಂಗಿನಿಂದ ಆದಾಯ ಒಂದು ತೆಂಗಿನ ಮರ ಇದ್ದರೆ ಆ ಮನೆಗೆ ಒಬ್ಬ ಮಗನಿದ್ದಂತೆ ಎಂಬ ಗಾದೆ ಮಾತಿನಂತೆ ಇವರು 2 ಎಕರೆ ವಿಸ್ತೀರ್ಣದಲ್ಲಿ ಈ ಹಿಂದೆಯೇ ತೆಂಗಿನ ಸಸಿ ನೆಟ್ಟು ಪೋಷಣೆ ಮಾಡಿದ್ದರ ಫಲವಾಗಿ ಇಂದು ತೆಂಗಿನ ಮರಗಳು ಉತ್ತಮ ಸಲು ನೀಡುತ್ತಿವೆ. ಈಗ ಮಾರುಕಟ್ಟೆಯಲ್ಲಿ ತೆಂಗಿಗೆ ಉತ್ತಮ ಬೆಲೆ ಇದೆ. ತೆಂಗಿನ ಸಸಿಗಳನ್ನು ನರ್ಸರಿಗಳಿಂದ ತರದೆ, ಸ್ವತ@ ತೋಟದ ಲಭರಿತ ತೆಂಗಿನ ಕಾಯಿಗಳನ್ನು ನಾಟಿ ಮಾಡಿ ಸಸಿಯಾಗಿಸಿದ್ದಾರೆ. ಅವುಗಳನ್ನೇ ತೋಟದಲ್ಲಿ ಹಾಕುತ್ತಿದ್ದಾರೆ. ತೆಂಗಿನ ಸಸಿಗಳು ಸೊಗಸಾಗಿ ಬಂದಿವೆ. ನರೇಗಾ ಯೋಜನೆ ಬಳಕೆ ಕೇಂದ್ರ ಸರ್ಕಾರದ ಮಹತ್ವಾಕಾಂೆ ಯೋಜನೆಯಲ್ಲಿ ಒಂದಾದ ನರೇಗಾ ಉದ್ಯೋಗ ಖಾತ್ರಿ ಯೋಜನೆಯಡಿ ಜಮೀನಿನಲ್ಲಿ ಎರಡು ಕೃಷಿ ಹೊಂಡ ತೆಗೆಸಿದ್ದು, ಅದರಲ್ಲಿ ಬೋರ್ವೆಲ್ನಿಂದ ನೀರನ್ನು ಸಂಗ್ರಹ ಮಾಡಿ ನಂತರ ಜಮೀನಿಗೆ ಹರಿಸುತ್ತಿದ್ದಾರೆ. ಜತೆಗೆ ಹನಿ ನೀರಾವರಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಇದರಿಂದ ಮಿತಿಯಾದ ನೀರಿನ ಬಳಕೆ ಹಾಗೂ ಮ್ಯಾನ್ ಪವರ್ ಕೂಡ ಕಡಿಮೆಯಾಗುತ್ತದೆ. ಇದರ ಜತೆಗೆ ಇತ್ತೀಚಿನ ದಿನಗಳಲ್ಲಿ ಜೇನು ಕೃಷಿ ಮಾಡಲು ಮುಂದಾಗಿದ್ದಾರೆ. ಪ್ರಾಯೋಗಿಕವಾಗಿ 15 ಜೇನು ಪೆಟ್ಟಿಗೆಗಳನ್ನು ಇಟ್ಟಿದ್ದಾರೆ. ಸಾವಯವ ಕೃಷಿಗೆ ಒತ್ತು ಎಲ್ಲ ಬೆಳೆಗಳಿಗೆ ಸಾವಯವ ಗೊಬ್ಬರವನ್ನೇ ಬಳಕೆ ಮಾಡುವುದು ವಿಶೇಷ. ಹುರುಳಿಕಾಯಿ, ಹೀರೇಕಾಯಿ, ಟೊಮ್ಯಾಟೊ ಸೇರಿ ಹಲವು ಬೆಳೆ ಬೆಳೆಯುತ್ತಾರೆ. ಈ ಬೆಳೆಗಳಿಗೆಲ್ಲ ಕೊಟ್ಟಿಗೆ ಗೊಬ್ಬರ ಬಳಕೆ ಮಾಡುತ್ತಾರೆ. ಅಗತ್ಯ ಬಿದ್ದ ಸಂದರ್ಭದಲ್ಲಿ ಮಾತ್ರ ರಾಸಾಯನಿಕ ಗೊಬ್ಬರ ಬಳಕೆ ಮಾಡುತ್ತಾರೆ. ಜತೆಗೆ ರಾಸುಗಳನ್ನು ಕಟ್ಟಿಕೊಟ್ಟಿರುವುದರಿಂದ ಕೊಟ್ಟಿಗೆ ಗೊಬ್ಬರ ಖರೀದಿ ಮಾಡುವಂತಿಲ್ಲ. ಗೊಬ್ಬರದ ಖರ್ಚು ಕಡಿಮೆಯಾಗುತ್ತದೆ. ಮುಡಿಗೇರಿದ ಪ್ರಶಸ್ತಿಗಳು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಜತೆಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವ ಇವರು ಅಲ್ಲಿನ ಅಧಿಕಾರಿಗಳ ಮಾರ್ಗದರ್ಶನ ಪಡೆದು ಬೇಸಾಯ ಮಾಡುತ್ತಾರೆ. ಇವರ ಸಮಗ್ರ ಕೃಷಿ ಪದ್ಧತಿ ಹಾಗೂ ಕೃಷಿ ಮೇಲಿನ ಬದ್ಧತೆ ಗುರುತಿಸಿ ಸಂ ಸಂಸ್ಥೆಗಳು ಹಾಗೂ ಇಲಾಖೆಯಿಂದ ಪ್ರಶಸ್ತಿಗಳು ಲಭಿಸಿವೆ. ತೋಟದ ಬೆಳೆಗಾರರ ಸಹಕಾರ ಸಂದಿಂದ ಪ್ರಗತಿಪರ ರೈತ ಪ್ರಶಸ್ತಿ, ಕರ್ನಾಟಕ ರಣಾ ವೇದಿಕೆಯಿಂದ ಸಮಗ್ರ ಕೃಷಿ ರೈತ ಪ್ರಶಸ್ತಿ ಗಳು ಸಿಕ್ಕಿವೆ.
ವ್ಯವಸಾಯ ಮಾಡಲು ಶ್ರದ್ಧೆ ಮುಖ್ಯ. ಕಾಟಾಚಾರಕ್ಕೆ ಕೃಷಿ ಮಾಡಿ ಸಾಲ ಮಾಡಿಕೊಂಡೆ ಎನ್ನುವುದು ಸರಿಯಲ್ಲ. ಯಾವುದೇ ಬೆಳೆ ಹಾಕಿದರೂ ವೈಾನಿಕ ಕ್ರಮ ಅನುಸರಿಸಬೇಕಾಗುತ್ತದೆ. ಕಡಿಮೆ ಜಮೀನಿನಲ್ಲಿ ವಿವಿಧ ರೀತಿಯ ಬೆಳೆ ಬೆಳೆದರೆ ಲಾಭ ಕಾಣಬಹುದಾಗಿದೆ. ಬೆಳೆ ಬೆಳೆಯುವುದು ಎಷ್ಟು ಮುಖ್ಯವೋ ಬೆಳೆದ ಬೆಳೆ ಮಾರಾಟ ಮಾಡುವುದು ಕೂಡ ಒಂದು ಕಲೆಯಾಗಿರುತ್ತದೆ. > ರಂಗಸ್ವಾಮಿ, ರೈತ