ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದು ಎಂಐಟಿ ಉದ್ದೇಶ

Oplus_16908288
ನಂಜನಗೂಡು ತಾಲೂಕಿನ ಎಂಐಟಿ ಕಾಲೇಜಿನಲ್ಲಿ ಹೊಸ ಉದ್ಯಮಶೀಲತೆ ಯುವ ತಾಂತ್ರಿಕತೆ ಕಾರ್ಯಾಗಾರ ನಡೆಯಿತು. ಡಾ.ವೈ.ಟಿ. ಕೃಷ್ಣೇಗೌಡ, ರಾಮ್ ಕೆವಲೂರು, ಭಾಸ್ಕರ್ ಕಳಲೆ, ಮಂಜುನಾಥ್ ಭಟ್, ಧರ್ಮಪ್ರಸಾದ್, ಡಾ.ಎಚ್.ಕೆ.ಚೇತನ್, ಮೊಹಮ್ಮದ್ ಸಲಾಮತ್ ಸೇರಿದಂತೆ ಇತರರು ಇದ್ದರು.
Published on

ನಂಜನಗೂಡು : ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದು ಸಂಸ್ಥೆಯ ಮುಖ್ಯ ಧ್ಯೇಯ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ವೈ.ಟಿ.ಕೃಷ್ಣೇಗೌಡ ತಿಳಿಸಿದರು.

ತಾಲೂಕಿನ ತಾಂಡವಪುರ ಬಳಿ ಇರುವ ಎಂಐಟಿ ಕಾಲೇಜಿನಲ್ಲಿ ಆಯೋಜಿಸಿರುವ ಎರಡು ದಿನಗಳ ಹೊಸ ಉದ್ಯಮಶೀಲತೆ ಯುವ ತಾಂತ್ರಿಕತೆ ಕಾರ್ಯಾಗಾರದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದರು.

ಮುಖ್ಯವಾಗಿ ದೇಶದ ಅಭಿವೃದ್ಧಿಯನ್ನು ತಾಂತ್ರಿಕವಾಗಿ ಬಲಪಡಿಸುವ ನಿಟ್ಟಿನಲ್ಲಿ ತಂತ್ರಜ್ಞಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ, ಫಲಿತಾಂಶ ಹಾಗೂ ಪ್ಲೇಸ್ಮೆಂಟ್ ವಿಷಯದಲ್ಲಿ ರಾಜ್ಯದ ಗಮನವನ್ನು ಸೆಳೆಯುತ್ತಿರುವ ತಾಂತ್ರಿಕ ಶಿಕ್ಷಣ ಸಂಸ್ಥೆ, ಮಹಾರಾಜ ಶಿಕ್ಷಣ ಸಂಸ್ಥೆಯಾಗಿದೆ. ಕಳೆದ ಎರಡು ದಿನಗಳಿಂದ ನಿರಂತರವಾಗಿ 24 ಗಂಟೆ ಕಾಲ ಸತತವಾಗಿ ನಡೆಯುವ ವಿದ್ಯಾರ್ಥಿಗಳ ತಾಂತ್ರಿಕ ಮತ್ತು ಶೈಕ್ಷಣಿಕ ಪ್ರತಿಭೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಪ್ರತಿ ವರ್ಷ ನಡೆಸುವ ಈ ಕಾರ್ಯಕ್ರಮವು ಮಾರುಕಟ್ಟೆಯ ಅಭಿವೃದ್ಧಿಯ ಉದ್ದೇಶದಿಂದ ಮತ್ತು ತಾಂತ್ರಿಕವಾಗಿ ಎಂಐಟಿ ಕಾಲೇಜು ಅತ್ಯುತ್ತಮವಾಗಿದೆ. ಪಾಲಕರು ಇಂತಹ ತಾಂತ್ರಿಕ ವಿದ್ಯಾ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ಮಕ್ಕಳ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು ಎಂದರು.

ರಾಮ್ ಕೆವಲೂರು, ಭಾಸ್ಕರ್ ಕಳಲೆ, ಮಂಜುನಾಥ್ ಭಟ್, ಧರ್ಮಪ್ರಸಾದ್, ಡಾ. ಎಚ್.ಕೆ. ಚೇತನ್, ಡಾ.ಸುನಿಲ್, ಸುಹಾಸಿನಿ, ಭಾರದ್ವಾಜ್, ಅನು, ರಕ್ಷಿತಾ, ಪ್ರತಾಪ್, ಮಹಮ್ಮದ್ ಸಲಾಮತ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net