

ಮಂಗಳೂರು : ರಿಶಭ್ ಶೆಟ್ಟಿ ನಿರ್ದೇಶನದ ‘ಕಾಂತಾರ ’ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ದಕ್ಷಿಣ ಕನ್ನಡದ ಕಾಂಗ್ರೆಸ್ ನಾಯಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರು ರಾಜ್ಯ ಸರ್ಕಾರವನ್ನು ವಿನಂತಿಸಿದ್ದಾರೆ.
ದೈವಾರಾಧನೆಗೆ ತುಳುನಾಡಿನಲ್ಲಿ ಪ್ರಮುಖ ಸ್ಥಾನವಿದೆ. ಒಂದು ಸಿನಿಮಾದ ಮುಖಾಂತರ ದೈವಾರಾಧನೆಯ ವಿಶಿಷ್ಟತೆ ಹಾಗೂ ಪ್ರಾಮುಖ್ಯತೆಯ ಬಗ್ಗೆ ಜನರ ಮನಮುಟ್ಟಿಸುವ ಪ್ರಯತ್ನ ಕಾಂತಾರ ಚಿತ್ರದ ಮೂಲಕ ಫಲಿಸಿದೆ .ತುಳುನಾಡಿನ ದೈವಾರಾಧನೆಯ ವೈಶಿಷ್ಟೃತೆಯನ್ನು ಬಿಂಬಿಸುವ ಜತೆಗೆ ಆರಾಧನೆಯ ಮಹತ್ವವನ್ನು ಸಾರಿ ಹೇಳಿದ ಕಾಂತಾರ ಸಿನಿಮಾ ಮನೆಮನೆಗೆ ತಲುಪಬೇಕು. ಸಮಾಜದಲ್ಲಿ ದೈವಾರಾಧನೆಯ ಬಗ್ಗೆ ಜಾಗೃತಿ ಮೂಡಿಸಿದ ಈ ಸಿನಿಮಾಮಕ್ಕೆ ತೆರಿಗೆ ವಿನಾಯಿತಿ ನೀಡಬೇಕೆಂದು ಮಿಥುನ್ ರೈ ಅವರು ಮುಖ್ಯಮಂತ್ರಿ ಅವರನ್ನು ಕೋರಿದ್ದಾರೆ.
………………………