

ಮೈಸೂರು: ನಗರದ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗ, ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಮತ್ತು ಇಂಡಿಯನ್ ಜಿಯೋಟೆಕ್ನಿಕಲ್ ಸೊಸೈಟಿ ವತಿಯಿಂದ ರೀಸೆಂಟ್ ಅಡ್ವಾನ್ಸಸ್ ಇನ್ ಜಿಯೋಟೆಕ್ನಿಕ್ಸ್ ಫಾರ್ ಇನ್ಫ್ರಾಸ್ಟ್ರಕ್ಚರ್ ಕುರಿತು ರಾಷ್ಟ್ರೀಯ ಕಾರ್ಯಾಗಾರ ಗುರುವಾರ ಏರ್ಪಡಿಸಲಾಗಿತ್ತು.
ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಸಿವಿಲ್ ಇಂಜಿನಿಯರ್‌ಗಳು, ಅಧ್ಯಾಪಕರು ಮತ್ತು ಮೈಸೂರು ಮತ್ತು ಸುತ್ತಮುತ್ತಲಿನ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಇಂದೋರ್‌ನ ಐಐಟಿ ಪ್ರಾಧ್ಯಾಪಕಿ ಪ್ರೊ.ನೀಲಿಮಾ ಸತ್ಯನ್ ‘ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತದ ಅಧ್ಯಯನ’, ಸಂಪನ್ಮೂಲ ವ್ಯಕ್ತಿ ಅನ್ನಪೂರ್ಣಿ ಅಯ್ಯರ್ ‘ಡೀಲಿಂಗ್ ವಿತ್ ಲ್ಯಾಂಡ್‌ಸ್ಲೈಡ್ಸ್’, ಸಂಪನ್ಮೂಲ ವ್ಯಕ್ತಿ ಡಾ. ಪಿ.ಎಸ್.ಆರ್. ನರಸಿಂಹರಾಜು ‘ದಟ್ಟವಾದ ಮಣ್ಣಿನಲ್ಲಿನ ಶಕ್ತಿ ಮತ್ತು ಅಡಿಪಾಯಗಳ ಮೌಲ್ಯಮಾಪನ’, ಇಂಡಿಯನ್ ಜಿಯೋಟೆಕ್ನಿಕಲ್ ಸೊಸೈಟಿ ಮೈಸೂರು ಅಧ್ಯಕ್ಷ ಡಾ. ಎಸ್.ಕೆ.ಪ್ರಸಾದ್ ‘ಕಪ್ಪು ಹತ್ತಿ ಮಣ್ಣಿನಲ್ಲಿ ಅಡಿಪಾಯ ಭದ್ರಗೊಳಿಸುವ ಸವಾಲುಗಳು’ ವಿಷಯದ ಕುರಿತು ಉಪನ್ಯಾಸ ನೀಡಿದರು.
ಎಂಐಟಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಸಿ. ರಾಮಕೃಷ್ಣೇಗೌಡ, ಎಂಐಟಿಎಂ ಕಾಲೇಜು ಪ್ರಾಂಶುಪಾಲ ಡಾ.ಬಿ.ಜಿ.ನರೇಶ್ ಕುಮಾರ್, ಎಸ್‌ಜೆಸಿಇ ಕಾಲೇಜು ಪ್ರಾಂಶುಪಾಲ ಡಾ.ಎಂ.ಸಿ.ನಟರಾಜು, ವಿವಿಸಿಇ ಪ್ರಾಂಶುಪಾಲ ಸದಾಶಿವೇಗೌಡ, ಎಟಿಎಂಇಸಿಇ ಕಾಲೇಜು ಪ್ರಾಂಶುಪಾಲ ಡಾ.ಎ.ಕೆ.ಮೂರ್ತಿ, ಮಹಾರಾಜ ಎಜುಕೇಷನ್ ಟ್ರಸ್ಟ್ ಪದಾಧಿಕಾರಿಗಳಾದ ಡಾ.ಎಸ್.ಮುರಳಿ, ಡಾ.ಟಿ.ವಾಸುದೇವ್ ಹಾಗೂ ಇತರರು ಇದ್ದರು.