ಎಸ್‌ಸಿಪಿ, ಟಿಎಸ್‌ಪಿ ಅನುದಾನದಲ್ಲಿ ದುರ್ಬಳಕೆ

3 ckm 4
ಚಿಕ್ಕಮಗಳೂರು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಡಿ.ಎನ್.ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದ ಡಿಎಸ್‌ಎಸ್ ಮುಖಂಡರು ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಾಂಗಕ್ಕೆ ಸಂಬAಧಪಟ್ಟ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ವೆಂಕಟೇಶ್, ದಿನೇಶ್, ಹರೀಶ್, ಪುಟ್ಟಸ್ವಾಮಿ, ಶಿವಕುಮಾರ್ ಉಪಸ್ಥಿತರಿದ್ದರು.
Published on

ಚಿಕ್ಕಮಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಾಂಗಕ್ಕೆ ಸಂಬAಧಪಟ್ಟ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಡಿಎಸ್‌ಎಸ್ ಮುಖಂಡರು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಡಿ.ಎನ್.ಶ್ರೀಧರ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ವೆಂಕಟೇಶ್, ಪ್ರತಿ ವರ್ಷವು ಕೋಟ್ಯಾಂತರ ರೂ. ಕಾಮಗಾರಿಗಳನ್ನು ಎಸ್‌ಸಿಪಿ ಮತ್ತು ಟಿಎಸ್‌ಪಿ ಸಮುದಾಯದ ಹೆಸರಿನಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃಧ್ದಿಗಾಗಿ ಹಣ ಬಿಡುಗಡೆಗೊಂಡರೂ ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ ಎಂದು ದೂರಿದರು.
ಎಸ್ಸಿ, ಎಸ್ಟಿ ಸಮುದಾಯದ ವಾಸಿಸುವ ಸ್ಥಳದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡದೇ, ಸಾಮಾನ್ಯ ವರ್ಗದ ಜನರು ವಾಸಿಸುವ ಪ್ರದೇಶಗಳಲ್ಲಿ ಕಾಮಗಾರಿ ಮಾಡಲಾಗಿದೆ. ಈ ಪ್ರಕರಣಗಳು ಪ್ರತಿವರ್ಷವು ವಂಚನೆ ಹಾಗೂ ಭಾರೀ ಭ್ರಷ್ಟಚಾರಗಳಿಂದ ಕೂಡಿರುತ್ತದೆ ಎಂದು ಆರೋಪಿಸಿದರು.
ಈ ರೀತಿಯ ಅಕ್ರಮಕ್ಕೆ ಸಂಬAಧಿಸಿದAತೆ ಸಂಬAಧಪಟ್ಟ ಮೇಲಧಿಕಾರಿಗಳಿಗೆ ದೂರನ್ನು ನೀಡಿದರೂ ಯಾವುದೇ ತನಿಖೆ ಅಥವಾ ಕ್ರಮಗಳನ್ನು ಜರುಗಿಸಿಲ್ಲ. ಹೀಗಾಗಿ ಎರಡು ವರ್ಷಗಳಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಳಲ್ಲಿ ಭಾರೀ ಭ್ರಷ್ಟಚಾರ ನಡೆಸಲಾಗಿದೆ. ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದರೆ ಯಾವುದೇ ಕಾಮಗಾರಿ ಮಂಜೂರಾಗಿಲ್ಲ ಎಂದು ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಂ.ಎA.ಡಿ.ಹಳ್ಳಿ ಮಲ್ಲೇಶ್ವರ ದೇವಸ್ಥಾನದಿಂದ ದುಂಗೆರೆ ಕಾಲನಿ ಸಂಪರ್ಕ ರಸ್ತೆ, ಈಶ್ವರಹಳ್ಳಿ ಗ್ರಾಪಂ ವಡೇರಹಳ್ಳಿ ರಸ್ತೆ, ಮೂಗ್ತಿಹಳ್ಳಿ ಗ್ರಾಪಂ ಶಿರಗುಂದ ಕಾಲನಿ ಕಾಂಕ್ರೀಟ್ ರಸ್ತೆ, ದುಂಗೆರೆಯಿAದ ಎಂ.ಎA.ಡಿ.ಹಳ್ಳಿ ರಸ್ತೆಯ ಉಳಿಕೆ ಕಾಮಗಾರಿ, ಚಿಕ್ಕಕುರುಬರಹಳ್ಳಿಯಿಂದ ಬಿಳೇಕಲ್ಲು ರಸ್ತೆ ಅಭಿವೃದ್ಧಿ, ನಗರದ ಹೌಸಿಂಗ್‌ಬೋರ್ಡ್ ಸಂಜೀವಿನಿ ಶಾಲೆ ಹಿಂಭಾಗವಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾ ರ್ಥಿ ನಿಲಯಕ್ಕೆ ಸಾಗುವ ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ಕಡೆಗಳಲ್ಲಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದರು.
ಇಷ್ಟೆಲ್ಲಾ ಅವ್ಯವಹಾರ ನಡೆದಿರುವುದನ್ನು ಗಮನಿಸಿದರೆ ಸಂಬAಧಪಟ್ಟ ಇಂಜಿನಿಯರ್‌ಗಳು ಭ್ರಷ್ಟಚಾರವನ್ನು ಮರೆಮಾಚಲು ಮುಂದಾಗಿರುವುದು ಸ್ಪಷ್ಟವಾಗಿದೆ. ಮಾಹಿತಿಯ ಮೇರೆಗೆ ಪರಿಶೀಲಿಸಲಾದ ಕಾಮಗಾರಿಗಳ ಪಟ್ಟಿಯಲ್ಲಿ ಈ ಮೇಲ್ಕಂಡ ಕಾಮಗಾರಿಗಳು ಭ್ರಷ್ಟತೆಯಿಂದ ಕೂಡಿದ್ದು ಎಸ್ಸಿ, ಎಸ್ಟಿ ಪಂಗಡಗಳಿಗೆ ಭಾರಿ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಡಿಎಸ್‌ಎಸ್ ಮುಖಂಡರಾದ ದಿನೇಶ್, ಹರೀಶ್, ಪುಟ್ಟಸ್ವಾಮಿ, ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net