

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಜಂಬಗಿ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆ ಅನುದಾನ ದುರ್ಬಳಕೆಯಾಗಿರುವ ಹಿನ್ನೆಲೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಪಂ ಇಒ ಶಿವಾನಂದ ಕಲ್ಲಾಪುರ ಶಿಾರಸು ಮಾಡಿದ್ದಾರೆ.
ತಾಲೂಕಿನ ಜಂಬಗಿ ಗ್ರಾಪಂನಲ್ಲಿ 2022&23ನೇ ಸಾಲಿನ 14 ಮತ್ತು 15ನೇ ಹಣಕಾಸು ಯೋಜನೆ ಅನುದಾನ ದುರ್ಬಳಕೆ ಮಾಡಲಾಗಿದೆ ಎಂದು ರಡ್ಡೇರಹಟ್ಟಿ ಗ್ರಾಮದ ಅವಿನಾಶ ಗುಂಡು ಬೆಳ್ಳಂಕಿ ನೀಡಿದ ದೂರಿನನ್ವಯ ಅಥಣಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ ಜಂಬಗಿ ಗ್ರಾಪಂ ಕಾರ್ಯಲಯಕ್ಕೆ ಜೂನ್ 30ರಂದು ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸಿದಾಗ ಪಂಪ್, ಮೋಟಾರ್ ದುರಸ್ತಿಗೆ ಒಬ್ಬನ ಹೆಸರಲ್ಲಿ ಮೋಟಾರ್ ವೈಂಡಿಂಗ್ ಮತ್ತು ರೀಪೇರಿಗಾಗಿ 5,33,273 ರೂ. ಪಾವತಿಸಿರುವುದು ಪತ್ತೆಯಾಗಿದೆ.
ಅನುದಾನ ಬಳಕೆ ಮಾಡಿಕೊಂಡಿರುವ ಕುರಿತು ಕಿರಿಯ ಅಭಿಯಂತರಿಂದ ಅಂದಾಜು ಪತ್ರಿಕೆ ತಯಾರಿಸಿಲ್ಲ. ಅಳತೆ ಪುಸ್ತಕದಲ್ಲಿ ದಾಖಲು ಬರೆಸಿಲ್ಲ. ಗ್ರಾಪಂ ವ್ಯಾಪ್ತಿಯಲ್ಲಿ ಅಳವಡಿಸಲಾದ ಪೈಪ್ಗಳ ಲಾಗಬುಕ್ ನಿರ್ವಹಿಸಿಲ್ಲ. 9 ಕಾಮಗಾರಿಗಳಿಗೆ ಸಂಬಂಧಿಸಿದ ದರಪಟ್ಟಿ ಕರೆಯದೇ ಸಾಮಗ್ರಿಗಳನ್ನು ಖರೀದಿಸಲಾಸಲಾಗಿದೆ. ಈ ಎಲ್ಲ ತಪು$್ಪಗಳ ಹಿನ್ನೆಲೆಯಲ್ಲಿ ಪಿಡಿಒ ಎಸ್.ಎಂ.ರಾಠೋಡ ವಿರುದ್ಧ ಕ್ರಮಕ್ಕೆ ಶಿಾರಸು ಮಾಡಲಾಗಿದೆ.