ಗೊಬ್ಬರ ಮಾರಾಟ ಪ್ರಮಾಣ ಪತ್ರ ದುರ್ಬಳಕೆ

fertilaizer
ಗೊಬ್ಬರ ಮಾರಾಟ ಪ್ರತಿನಿಧಿಯ ಅರ್ಹತಾ ಪ್ರಮಾಣ ಪತ್ರ ದುರ್ಬಳಕೆ ಹಿನ್ನೆಲೆಯಲ್ಲಿ ಗಂಗಾವತಿಯ ರಸಗೊಬ್ಬರ ಮಾರಾಟದ ಶ್ರೀದೀಪ ಟ್ರೇಡಿಂಗ್ ಕಂಪನಿ ದಾಖಲೆಯನ್ನು ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್‌ಪರಿಶೀಲಿಸಿದರು.
Published on

ಗಂಗಾವತಿ: ಗೊಬ್ಬರ ಮಾರಾಟ ಪ್ರತಿನಿಧಿಯ ಅರ್ಹತಾ ಪ್ರಮಾಣ ಪತ್ರ ದುರ್ಬಳಕೆ ಹಿನ್ನೆಲೆಯಲ್ಲಿ ನಗರದ ರಸಗೊಬ್ಬರ ಮಾರಾಟದ ಶ್ರೀದೀಪ ಟ್ರೇಡಿಂಗ್ ಕಂಪನಿ ಮತ್ತು ಸಂದೀಪ ಆಗ್ರೋ ಏಜೆನ್ಸಿಯ ಚಿಲ್ಲರೆ ರಸಗೊಬ್ಬರ ಮಾರಾಟದ ಪರವಾನಗಿಯನ್ನು ಕೃಷಿ ಇಲಾಖೆ ಅಧಿಕಾರಿಗಳು ಬುಧವಾರ ರದ್ದುಪಡಿಸಿದರು.

ಗಂಗಾವತಿ ಮತ್ತು ಕಂಪ್ಲಿಯಲ್ಲಿ ಮಾರಾಟಗಾರ ಮಾಕಿನೇನಿ ಶ್ರೀಕಾಂತ ಎಂಬುವರು ಎರಡು ಕಡೆ ಒಬ್ಬ ವ್ಯಕ್ತಿಯ ಅರ್ಹತಾ ಪ್ರಮಾಣ ಪತ್ರ ನೀಡಿ ಪರವಾನಗಿ ಪಡೆದುಕೊಂಡಿದ್ದರು. ಈ ಬಗ್ಗೆ ಅಧಿಕಾರಿಗಳ ತಂಡ ಪರಿಶೀಲನೆಯಲ್ಲಿ ಗೊತ್ತಾಗಿದ್ದು, ನೋಟಿಸ್ ಜಾರಿ ಮಾಡಲಾಗಿತ್ತು. ಸಮಂಜಸ ಉತ್ತರ ನೀಡದಿದ್ದರಿಂದ ರಸಗೊಬ್ಬರ ನಿಯಂತ್ರಣ ಆದೇಶದನ್ವಯ ಪರವಾನಗಿ ರದ್ದುಪಡಿಸಲಾಗಿದೆ ಎಂದು ಸಹಾಯಕ ಕೃಷಿನಿರ್ದೇಶಕ ಸಂತೋಷ ಪಟ್ಟದಕಲ್ ತಿಳಿಸಿದ್ದಾರೆ.ರೈತ ಸಂಪರ್ಕ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net