ಗೃಹ ಬಳಕೆಯ ಅಡುಗೆ ಅನಿಲ‌ ಸಿಲಿಂಡರ್ ದುರ್ಬಳಕೆ, ನಿಲ್ಲದ ದಂಧೆ

22-4-1.jpg
Published on

ಚಿಕ್ಕಬಳ್ಳಾಪುರ: ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿರುವ ಆಹಾರ ಇಲಾಖೆ ಅಧಿಕಾರಿಗಳು, ವಿವಿಧ ಗ್ರಾಮಗಳಲ್ಲಿ 15 ಸಿಲಿಂಡರ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರ ಹಾಗೂ ಗ್ರಾಮೀಣ ಪ್ರದೇಶದ ಬಹುತೇಕ ಕಾಫಿ ಟೀ ಅಂಗಡಿ, ಬಾರ್ ಆಂಡ್ ರೆಸ್ಟೋರೆಂಟ್, ವೆಜ್ ಅಂಡ್ ನಾನ್ ವೆಜ್ ಹೋಟೆಲ್ ಗಳು ಸೇರಿ ಸಿಹಿತಿಂಡಿ ತಯಾರು ಮಾಡುವ ಅಂಗಡಿಗಳಲ್ಲಿ ಮತ್ತು ಮದುವೆ ಸಮಾರಂಭಗಳಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ರ್ಗಳನ್ನು ಬಳಸುವ ಬದಲು ಗೃಹಬಳಕೆ ಸಿಲಿಂಡರ್ ರ್ಗಳನ್ನು ಬಳಸುತ್ತಿದ್ದಾರೆ. ಈ ಬಗ್ಗೆ ಎಚ್ಚೆತ್ತಿರುವ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆಹಾರ ಶಿರಸ್ತೇದಾರ್ ಎ.ಎನ್.ನಟರಾಜರೆಡ್ಡಿ ಹಾಗೂ ಆಹಾರ ನಿರೀಕ್ಷಕರ ನೇತೃತ್ವದ ತಂಡ ತಾಲೂಕಿನ ಬುರುಡಗುಂಟೆ, ಏನಿಗದೆಲೆ, ಮಿಂಚಿಲಹಳ್ಳಿ ಕ್ರಾಸ್, ಕೆಂಚಾರ್ಲಹಳ್ಳಿಯ ವಿವಿಧ ಹೋಟೆಲ್ ಮತ್ತು ಕಾಫಿ ಟೀ ಅಂಗಡಿಗಳ ಮೇಲೆ ದಾಳಿ ನಡೆಸಿ 15 ಸಿಲೆಂಡರ್ ಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಂಡಿದೆ.

ನಗರದಾದ್ಯಂತ ಬಹುತೇಕ ಕಡೆ ಗ್ಯಾಸ್ ರೀಫಿಲ್ಲಿಂಗ್ ದಂಧೆ ನಡೆಯುತ್ತಿದ್ದು, ಇದಕ್ಕೆ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ಗಳನ್ನು ಬಳಸಲಾಗುತ್ತಿದೆ. ಆದರೆ, ಗ್ರಾಮೀಣ ಭಾಗದಲ್ಲಿ ದಾಳಿ ನಡೆಸುವ ಅಧಿಕಾರಿಗಳು ನಗರದಲ್ಲಿ ಒಂದೇ ಒಂದು ಕಡೆ ಸಹ ದಾಳಿ ನಡೆಸಿರುವ ನಿದರ್ಶನವಿಲ್ಲ ಎಂಬ ಆರೋಪ ವ್ಯಾಪಕವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net