ಫೆ.7ರಂದು ಮಿಸ್ಟರ್ ರಾಣಿ ಚಿತ್ರ ತೆರೆಗೆ: ನಟ ದೀಪಕ್ ಸುಬ್ರಮಣ್ಯ ಮಾಹಿತಿ

Mister Rani Film Team Press Conference Mandya
Published on

ಮಂಡ್ಯ: ವಿಭಿನ್ನ ಕಥಾಪಾತ್ರಾಧಾರಿತ ಮಿಸ್ಟರ್ ರಾಣಿ ಚಲನಚಿತ್ರ ಫೆ.7ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಪ್ರೇಕ್ಷಕರು ಚಿತ್ರಮಂದಿರದಲ್ಲೇ ವೀಕ್ಷಿಸುವಂತೆ ನಾಯಕ ನಟ ದೀಪಕ್ ಸುಬ್ರಮಣ್ಯ ಮನವಿ ಮಾಡಿದರು.

ನಾಯಕ ನಟನಾಗಿ ಸುಮಾರು 11 ಚಲನಚಿತ್ರದಲ್ಲಿ ಅಭಿನಯಿಸಿದ್ದೇನೆ. ಅಂತೆಯೇ ಮಿಸ್ಟರ್ ರಾಣಿ ಚಲನಚಿತ್ರದಲ್ಲಿ 40 ಮಹಿಳಾ ಗೆಟಪ್‌ಗಳಲ್ಲಿ ಕಾಣಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಿಸ್ಟರ್ ರಾಣಿ ಚಲನಚಿತ್ರವನ್ನು ಮಧುಚಂದ್ರ ನಿರ್ದೇಶಿಸಿದ್ದು, ರಾಜ್ಯದಲ್ಲೇ ಚಿತ್ರೀಕರಣ ಮಾಡಲಾಗಿದೆ. ಎಕ್ಸೆಲ್ ಆರ್ಬಿಟ್ ಕ್ರಿಯೇಷನ್ಸ್ ನಿರ್ಮಾಣದ ಚಲನಚಿತ್ರಕ್ಕೆ 180 ಜನರು ನಿರ್ಮಾಪಕರಾಗಿ 4.5 ಕೋಟಿ ರೂ ಹೂಡಿದ್ದಾರೆ. ಚಲನಚಿತ್ರ ಪ್ರದರ್ಶನಕ್ಕೆ ಇತರೆ ರಾಜ್ಯಗಳಲ್ಲಿ ಕಡಿಮೆ ಬೆಲೆಯಿದ್ದು, ಕರ್ನಾಟಕದಲ್ಲಿ ಪ್ರದರ್ಶನ ಬೆಲೆ ಹೆಚ್ಚಿದೆ ಎಂದು ದೂರುಗಳಿರುವುದರಿಂದ ಫೆ.7ರಂದು ಪ್ರದರ್ಶನದ ಟಿಕೆಟ್ ಬೆಲೆಯನ್ನು 99 ರೂಗಳಿಗೆ ನೀಡಲಾಗುವುದು ಎಂದರು.

ಸಹ ನಿರ್ದೇಶಕ ತಂಡದ ಚಂದ್ರಕಾಂತ್, ಸಿದ್ದು, ವಿನೋದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net