ಸಮಾಜದಲ್ಲಿ ಬುದ್ಧಿವಂತರಿಂದಲೇ ಹೆಚ್ಚುತ್ತಿವೆ ತಪ್ಪುಗಳು

10 korategere 02_sslc-puc studendts abindane
ಕೊರಟಗೆರೆ ತಾಲೂಕಿನ ತಾಲೂಕಿನ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ರಂಭಾಪುರಿ ಖಾಸಾ ಶಾಖಾಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಪರೀೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಡಾ.ಪರಮೇಶ್​, ಮಮತಾ ದಿವಾಕರ್​, ಚಂದ್ರಶೇಖರ್​, ಕಾಳಪ್ಪ ಇದ್ದರು.
Published on

ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಕಳವಳ

ಕೊರಟಗೆರೆ: ವಿದ್ಯಾರ್ಥಿಗಳು ಕೇವಲ ಶಾಲಾ ಅಂಕಗಳಿಗೆ ಮಾತ್ರ ಒತ್ತು ನೀಡದೇ, ಸಮಾಜದಲ್ಲಿ ಮತ್ತು ಗುರು&ಹಿರಿಯರಿಂದ ಮೆಚ್ಚುಗೆ ಪಡೆಯುವಂತಹ ಸಂಸ್ಕಾರವನ್ನು ಅಳವಡಿಸಿಕೊಳ್ಳಬೇಕು ಎಂದು ಸಿದ್ದರಬೆಟ್ಟದ ಬಾಳೆಹೊನ್ನೂರು

ಖಾಸಾ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ರಂಭಾಪುರಿ ಖಾಸಾ ಶಾಖಾಮಠದಲ್ಲಿ ಭಾನುವಾರ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ೇಮಾಭಿವೃದ್ಧಿ

ಸಂದಿಂದ ಆಯೋಜಿಸಿದ್ದ ಸಮಾವೇಶ, ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಇಂದಿನ ಸಮಾಜದಲ್ಲಿ ಬುದ್ಧಿವಂತರೆ ಹೆಚ್ಚಿನ ತಪ್ಪುಗಳನ್ನು ಮಾಡುತ್ತಿರುವುದು ಕಳವಳಕಾರಿ. ಮನಸ್ಸು

ಹೇಳುವ ಒಳ್ಳೆಯ ಕಾರ್ಯಗಳನ್ನು ಮಾಡಲು ಹಿಂದೇಟು ಹಾಕಬಾರದು. ಹೆತ್ತವರನ್ನು ರ್ನಿಲಸುವ, ವೃದ್ಧಾಶ್ರಮಕ್ಕೆ ಕಳುಹಿಸುವಂತಹ ಸಂಸತಿ ನಮ್ಮದಲ್ಲ. ಅಂಕಗಳ ಜತೆಗೆ ಸಂಸ್ಕಾರಯುತ ಶಿಣವೇ ವ್ಯಕ್ತಿತ್ವದ ನಿಜವಾದ ಅಳತೆ ಎಂದು ಸ್ವಾಮೀಜಿ ತಿಳಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯ ಡಾ.ಪರಮೇಶ್​ ಮಾತನಾಡಿ, ಬಡತನದಿಂದಾಗಿ ಯಾರೂ ವಿದ್ಯಾಭ್ಯಾಸವನ್ನು ನಿಲ್ಲಿಸಬಾರದು, ಉತ್ತಮ ವಿದ್ಯೆ ಪಡೆಯಲು ಸಮುದಾಯದ ವಸತಿನಿಲಯಗಳು, ಶ್ರೇಷ್ಠ ಶಿಣ ಸಂಸ್ಥೆಗಳು ಸಾಕಷ್ಟು ಲಭ್ಯವಿವೆ. ವಿದ್ಯಾರ್ಥಿಗಳು ಅವುಗಳ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಜಿಲ್ಲಾಧ್ಯೆ ಮಮತಾ ದಿವಾಕರ್​ ಮಾತನಾಡಿ, ಪರೀೆಯಲ್ಲಿ ಹೆಚ್ಚು ಅಂಕ ಗಳಿಸುವವರಷ್ಟೇ ಬುದ್ಧಿವಂತರಲ್ಲ. ಪ್ರತಿಯೊಬ್ಬರಲ್ಲೂ ಒಂದು ವಿಶೇಷ ಪ್ರತಿಭೆ ಇರುತ್ತದೆ. ಪಾಲಕರು ಮಕ್ಕಳ ಪ್ರತಿಭೆಗೆ ಆದ್ಯತೆ, ಪೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಸರ್ಕಾರಿ ನೌಕರರು, ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಪರೀೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಸಂದ ಜಿಲ್ಲಾ ಉಪಾಧ್ಯ ಚಂದ್ರಶೇಖರ್​, ತಾಲೂಕು ಅಧ್ಯ ಎನ್​.ಇ.ಕಾಳಪ್ಪ, ಪ್ರಧಾನ ಕಾರ್ಯದರ್ಶಿ ಎಂ.ರಾಜಶೇಖರ್​, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯ ಭದ್ರಯ್ಯ, ತಾಲೂಕು ಸರ್ಕಾರಿ ನೌಕರರ ಸಂದ ಅಧ್ಯ ಎಚ್​.ಎಂ.ರುದ್ರೇಶ್​, ಜಿಪಂ ಮಾಜಿ

ಸದಸ್ಯೆ ದಾಾಯಿಣಿ ರಾಜಣ್ಣ, ತಾಪಂ ಮಾಜಿ ಅಧ್ಯ ಕೆ.ಬಿ. ಲೋಕೇಶ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net