ನಾಪತ್ತೆಯಾಗಿದ್ದಾತನ ಶವ ಹೊಳೆಯಲ್ಲಿ ಪತ್ತೆ

Suicide
Published on

ಕಾಸರಗೋಡು: ಪೆರಿಯ ಆಯಂಕಡವು ಹೊಳೆಯಲ್ಲಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಆಯಂಕಡವು ಸನಿಹದ ಬಂಗಾಡ್ ಹೊಳೆಯಲ್ಲಿ ಪತ್ತೆಯಾಗಿದೆ. ಉದುಯಪುರಂ ತಡಿಯಂವಳಪ್ಪು ನಿವಾಸಿ, ಶೋರೂಮ್ ಸಿಬ್ಬಂದಿ ಸಜಿತ್‌ಲಾಲ್(26) ಮೃತಪಟ್ಟ ಯುವಕ. ಶೋರೂಮ್‌ನಲ್ಲಿ ನಡೆಯುವ ಓಣಂ ಆಚರಣೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವುದಾಗಿ ಮನೆಯವರಲ್ಲಿ ತಿಳಿಸಿ ಸಜಿತ್‌ಲಾಲ್ ಸೆ.4ರಂದು ಹೊರಟವರು ನಾಪತ್ತೆಯಾಗಿದ್ದರು. ಅವರ ಚಪ್ಪಲಿ, ಬೈಕ್ ಹಾಗೂ ಹೆಲ್ಮೆಟ್ ಸೇತುವೆ ಸನಿಹ ಪತ್ತೆಯಾಗಿತ್ತು. ಹೊಳೆಗೆ ಧುಮುಕಿರುವ ಸಂಶಯದಿಂದ ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಸ್ಥಳೀಯ ನಿವಾಸಿಗಳು ಹುಡುಕಾಟ ನಡೆಸಿದ್ದರೂ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಸೆ.8ರಂದು ಅವರ ಮೃತದೇಹ ಬಾಂಗಾಡ್ ಹೊಳೆ ಸನಿಹದ ಮರದಲ್ಲಿ ಸಿಲುಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net