ನಾಪತ್ತೆಯಾಗಿದ್ದ ವೃದ್ಧನ ಅಸ್ಥಿಪಂಜರ 9 ತಿಂಗಳ ಬಳಿಕ ಪತ್ತೆ

drowning
Published on

ಪಡುಬಿದ್ರಿ: ಕಳೆದ ಮಳೆಗಾಲದಲ್ಲಿ ಹೊಳೆಯ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ವೃದ್ಧರೊಬ್ಬರ ಮೃತದೇಹದ ಅವಶೇಷಗಳು 9 ತಿಂಗಳ ಬಳಿಕ ಮಂಗಳವಾರ ಪತ್ತೆಯಾಗಿದೆ.

ಮಣಿಪುರ ಗ್ರಾಮದ ಕೊಡಂಗಳ ಮುಕುಡೆ ಶ್ರೀನಿವಾಸ ನಾಯ್ಕ(72) ಕೊಡಂಗಳ ವಿಷ್ಣುಮೂರ್ತಿ ದೇವಸ್ಥಾನದ ಸಮೀಪ ಹೊಳೆಯ ಸೇತುವೆ ಬದಿಯಲ್ಲಿ 2020 ಜುಲೈ 3ರಂದು ಕಾಣೆಯಾಗಿದ್ದರು. ಮಣಿಪುರದ ಮೂಡು ಕಲ್ಮಂಜೆ ಹೊಳೆಯ ಬದಿಯಲ್ಲಿ ಮಂಗಳವಾರ ಮೃತದೇಹ ಅವಶೇಷಗಳು ಪತ್ತೆಯಾಗಿದೆ. ಹೊಳೆ ಬದಿಯಲ್ಲಿ ಮನುಷ್ಯನ ಮೂಳೆ ಇರುವ ಬಗ್ಗೆ ಸ್ಥಳೀಯರು ಕರೆ ಮಾಡಿ ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಬಂದ ಮೃತರ ಪತ್ನಿ ಹಾಗೂ ಪುತ್ರ ದೇಹದ ಮೂಳೆ, ಅವಶೇಷಗಳು ಶ್ರೀನಿವಾಸ ಅವರದ್ದೆಂದು ಖಚಿತಪಡಿಸಿದ್ದಾರೆ. ಶ್ರೀನಿವಾಸ ಜುಲೈ 3ರಂದು ಸಾಯಂಕಾಲ ವೇಳೆ ವಿಪರೀತ ಮಳೆ ಬರುವಾಗ ಮಣಿಪುರ ಗ್ರಾಮದ ಕೊಡಂಗಳ ವಿಷ್ಣುಮೂರ್ತಿ ದೇವಸ್ಥಾನದ ಸಮೀಪ ಚಪ್ಪಲಿ ಮತ್ತು ಚೀಲ ಬದಿಯಲ್ಲಿ ಇಟ್ಟು ಹೊಳೆಯ ಬದಿಗೆ ಹೋದವರು ಅಕಸ್ಮಿಕವಾಗಿ ನೀರಿಗೆ ಬಿದ್ದು ಕಾಣೆಯಾಗಿದ್ದರು. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net