ಮಹಿಳೆ ನಾಪತ್ತೆ, ಹುಡುಕಾಟ

missing
Published on

ಸುಳ್ಯ: ಮರ್ಕಂಜದ ಮಿತ್ತಡ್ಕ ಮೋಹನ ಎಂಬುವರ ಪತ್ನಿ ಶೋಭಾಲತಾ(52) ಕಾಣೆಯಾಗಿರುವ ಹಿನ್ನೆಲೆಯಲ್ಲಿ ಅವರ ಮನೆಯ ಬಳಿ ಇರುವ ಬಾವಿಯಲ್ಲಿ ಶುಕ್ರವಾರ ಹುಡುಕಾಟ ನಡೆಸಲಾಯಿತು.

ಕೆಲ ದಿನಗಳ ಹಿಂದೆ ಶೋಭಾಲತಾ ಕಾಣೆಯಾಗಿದ್ದು ಎಲ್ಲೆಡೆ ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಗುರುವಾರ ಅಗ್ನಿಶಾಮಕ ದಳದ ಉಪಸ್ಥಿತಿಯಲ್ಲಿ ನೀರು ಖಾಲಿ ಮಾಡಿ ಹುಡುಕುವ ಪ್ರಯತ್ನ ನಡೆಸಲಾಯಿತು. ಆದರೆ ಒಳಭಾಗದಲ್ಲಿ ಬಾವಿ ಜರಿಯುತ್ತಿದ್ದ ಕಾರಣ ಕಾರ್ಯಾಚರಣೆ ನಿಲ್ಲಿಸಲಾಯಿತು.

ಪೊಲೀಸರು ಸುಳ್ಯ ತಹಸೀಲ್ದಾರ್‌ಗೆ ಈ ಬಗ್ಗೆ ಮಾಹಿತಿ ನೀಡಿದ ಕಾರಣ ಗುರುವಾರ ಸಂಜೆಯ ವೇಳೆಗೆ ಸ್ಥಳಕ್ಕೆ ಬಂದ ಸುಳ್ಯ ತಹಸೀಲ್ದಾರ್ ಹಿಟಾಚಿ ಯಂತ್ರದ ಮೂಲಕ ಮಣ್ಣು ಅಗೆಯಲು ಸೂಚನೆ ನೀಡಿದರು. ಅದರಂತೆ ಶುಕ್ರವಾರ ಹಿಟಾಚಿ ಯಂತ್ರ ಬಂದು ಮಣ್ಣು ತೆಗೆಯುವ ಕಾರ್ಯಾಚರಣೆ ಆರಂಭವಾಗಿದ್ದರೂ ಪ್ರಯೋಜನ ಆಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net