

ಬಂಟ್ವಾಳ: ಸಂಬಂಧಿಕರ ಮನೆಗೆ ಹೋಗುವುದಾಗಿ ಮನೆಯಿಂದ ಹೋದ ಯುವತಿಯೋರ್ವಳು ವಾಪಸು ಮನೆಗೆ ಬಾರದೆ ಕಾಣೆಯಾದ ಘಟನೆ ನಡೆದಿದೆ. ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ನಿವಾಸಿ ಗಿರಿಜಾ ಅವರ ಪುತ್ರಿ ಹರ್ಷಿತಾ(18) ಕಾಣೆಯಾದವಳು. ಹರ್ಷಿತಾ ಎಸ್.ಎಸ್.ಎಲ್.ಸಿ.ವರೆಗೆ ಕಲಿತು ಬಳಿಕ ಮನೆಯಲ್ಲಿದ್ದಳು.
ಸೆ.16ರಂದು ರಾತ್ರಿ ಊಟ ಮುಗಿಸಿ ರಾತ್ರಿ 11.30ರ ವೇಳೆಗೆ ಸಮೀಪ ಇರುವ ಅಕ್ಕನ ಮನೆಗೆ ಹೋಗಿ ಬೆಳಗ್ಗೆ ಬರುವುದಾಗಿ ತಿಳಿಸಿದ್ದಳು. ಆದರೆ ಯುವತಿ ಮರಳಿ ಬರದೆ ಇದ್ದಾಗ ಅವರ ಮನೆಗೆ ತೆರಳಿ ವಿಚಾರಿಸಿದಾಗ ಅವಳು ಮನೆಗೆ ಬಂದೇ ಇಲ್ಲವೆಂದು ತಿಳಿದಿದೆ. ಈಕೆ ಸೆ.4ರಂದು ಮನೆಯಲ್ಲಿ ಯಾರಿಗೂ ಹೇಳದೆ ಹೋಗಿದ್ದು, ಮರು ದಿನ ಬಂದಿದ್ದಳು. ಆ ವೇಳೆ ವಿಚಾರಿಸಿದಾಗ ಸ್ನೇಹಿತೆ ಮನೆಯಲ್ಲಿದ್ದೆ ಎಂದು ತಿಳಿಸಿದ್ದಳು. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.