ಔಷಧ ಖರೀದಿಸಲು ತೆರಳಿದ್ದಾಕೆ ನಾಪತ್ತೆ

missing case
Published on

ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನಾರಂಪಾಡಿ ನಿವಾಸಿ ಲೀಲಾವತಿ(60) ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಔಷಧ ಖರೀದಿಗಾಗಿ ಬದಿಯಡ್ಕಕ್ಕೆ ತೆರಳುವುದಾಗಿ ಮನೆಯಿಂದ ಹೊರಟವರು ವಾಪಸಾಗಿಲ್ಲ ಎಂದು ಪುತ್ರ ನೀಡಿದ ದೂರಿನನ್ವಯ ಕೇಸು ದಾಖಲಾಗಿದೆ.

ಈ ಮಧ್ಯೆ ಬದಿಯಡ್ಕ ತಲುಪಿದ್ದ ಲೀಲಾವತಿ ಆಟೋರಿಕ್ಷಾ ಒಂದರಲ್ಲಿ ಕುಂಬಳೆಗೆ ತೆರಳಿದ್ದಾರೆ. ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸನಿಹ ರಿಕ್ಷಾದಿಂದ ಇಳಿದಿದ್ದು, ನಂತರ ಈ ರಿಕ್ಷಾ ಬೇರೊಂದು ಬಾಡಿಗೆಗೆ ಮಂಜೇಶ್ವರಕ್ಕೆ ತೆರಳಿದೆ. ಅಲ್ಲಿಂದ ವಾಪಸಾಗುವ ಮಧ್ಯೆ ಮಹಿಳೆ ಕುಂಬಳೆ ಸೇತುವೆ ಸನಿಹ ನಡೆದುಹೋಗುತ್ತಿರುವುದನ್ನು ಕಂಡಿರುವುದಾಗಿ ಆಟೋ ಚಾಲಕ ತಿಳಿಸಿದ್ದರು. ಕೆಲವು ದಿನಗಳ ಹಿಂದೆ ಅಪಘಾತವೊಂದರಲ್ಲಿ ಕಾಲಿಗೆ ಉಂಟಾದ ಗಾಯದಿಂದ ಇವರು ಕುಂಟುತ್ತಾ ನಡೆಯುತ್ತಿದ್ದರೆನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net