

ಬಂಟ್ವಾಳ: ಸಜಿಪಮುನ್ನೂರು ಗ್ರಾಮದ ನಾಗನವಳಚ್ಚಿಲ್ ಮನೆಯ ಉಗ್ಗಪ್ಪ ಪೂಜಾರಿ(70) ಎಂಬುವರು ನಾಪತ್ತೆಯಾಗಿದ್ದು ದೂರು ದಾಖಲಾಗಿದೆ. ನವೆಂಬರ್ 5ರಂದು ಬೆಳಗ್ಗೆ 10ಕ್ಕೆ ಪಾಣೆಮಂಗಳೂರು ಬ್ಯಾಂಕ್‌ಗೆ ಹೋಗಿ ವೃದ್ಧಾಪ್ಯ ವೇತನ ಪಡೆದು ವಾಪಸ್ ಮನೆಗೆ ಬಂದು ಬಳಿಕ ಮೊಬೈಲ್ ಬಿಟ್ಟು ಮನೆಯಿಂದ ತೆರಳಿದ್ದರು. ಬಳಿಕ ನಾಪತ್ತೆಯಾಗಿದ್ದು ಮಾಹಿತಿ ಇದ್ದಲ್ಲಿ ಪೊಲೀಸ್ ಠಾಣೆಗೆ (08255232111) ತಿಳಿಸುವಂತೆ ಠಾಣಾಧಿಕಾರಿಯ ಪ್ರಕಟಣೆ ತಿಳಿಸಿದೆ.